Slide
Slide
Slide
previous arrow
next arrow

ಪರಿಸರ ಕೃಷಿ ವಿಧಾನ ಕುರಿತು ತರಬೇತಿ ಕಾರ್ಯಾಗಾರ ಯಶಸ್ವಿ

300x250 AD

ಮುಂಡಗೋಡ: ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಕೃಷಿ ವಿಶ್ವವಿದ್ಯಾಲಯ ಧಾರವಾಡ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಉತ್ತರ ಕನ್ನಡ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಮಳಗಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಫಾರ್ಮ್ ನಲ್ಲಿ ಪರಿಸರ ಕೃಷಿ ವಿಧಾನಗಳು ಕುರಿತಂತೆ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ, ಕೃಷಿ ಸಖಿಯರಿಗೆ ಆರು ದಿನಗಳ ತರಬೇತಿಯ ಉದ್ಘಾಟನಾ ಸಮಾರಂಭ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ.ಎಸ್.ಎಸ್. ಅಂಗಡಿ ಮಾತನಾಡುತ್ತಾ, ಸರ್ಕಾರದ ಮಾರ್ಗಸೂಚಿ ಮತ್ತು ಸವಲತ್ತುಗಳನ್ನು ಬಳಸಿ ಇತರರಿಗೂ ಅದರ ಉಪಯೋಗ ತಿಳಿಸಿ ಎಂದು ಕರೆ ನೀಡಿದರು.

ಶಿರಸಿಯ ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕರಾದ ನಟರಾಜ್ ಪಿ.ಎಚ್.ಮಾತನಾಡಿ, ಬಿತ್ತನೆಯಿಂದ ಮಾರಾಟವಾಗುವವರೆಗೂ ರೈತರೊಂದಿಗೆ ಕೃಷಿ ಸಖಿಯರು ಭಾಗವಹಿಸಬೇಕು ಎಂದು ಹೇಳಿ ಇಲಾಖೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಸಂಜೀವಿನಿ ಯೋಜನೆಯ ಜಿಲ್ಲಾ ಪಂಚಾಯತದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ನಾಗರಾಜ ಕಲ್ಮನೆ ಮಾತನಾಡಿ, ಸಂಜೀವಿನಿ ಯೋಜನೆಯ ರೂಪು ರೇಷೆಗಳ ಕುರಿತು ತಿಳಿಸಿದರು. ಸಹಾಯಕ ಕೃಷಿ ನಿರ್ದೇಶಕರಾದ ಎಂ.ಎಸ್.ಕುಲಕರ್ಣಿ ಹಾಗೂ ಮಳಗಿಯ ಪ್ರಗತಿಪರ ರೈತ, ನಿವೃತ್ತ ಶಿಕ್ಷಕರಾದ ಅರವಿಂದ ಗುಡವಿಯವರು ಕೃಷಿಯನ್ನು ನಂಬಿದರೆ ಜೀವನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು ಎಂದರು.

300x250 AD

ಜಿಲ್ಲಾ ಪಂಚಾಯತದ ಜಿಲ್ಲಾ ವ್ಯವಸ್ಥಾಪಕ ಪುಂಡಲೀಕ ಸಿರ್ಸಿಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರಂಭದಲ್ಲಿ ಶಿರಸಿಯ ಐಸಿಎಆರ್- ಕೆವಿಕೆಯ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ರೂಪಾ ಪಾಟೀಲ್ ಸ್ವಾಗತಿಸಿದರು. ಸಂಜೀವಿನಿ ಯೋಜನೆಯ ತಾಲೂಕ ಪಂಚಾಯತದ ವಲಯ ಮೇಲ್ವಿಚಾರಕರಾದ ಶಾಮಲಾ ನಾಯ್ಕ ವಂದಿಸಿದರು. ವಲಯ ಮೇಲ್ವಿಚಾರಕರಾದ ರಾಮಣ್ಣ ಪನ್ನೇರ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಭಟ್ಕಳ, ಹೊನ್ನಾವರ, ಕಾರವಾರ, ಜೋಯಿಡಾ, ಮುಂಡಗೋಡ ಸಿಬ್ಬಂದಿಯವರು ಉಪಸ್ಥಿತರಿದ್ದರು. ಪಶು ವಿಜ್ಞಾನಿ ಡಾ. ರಂಗನಾಥ್ ಹಾಗೂ ತೋಟಗಾರಿಕಾ ವಿಜ್ಞಾನಿ ಡಾ.ಹರೀಶ್ ತರಬೇತಿಯನ್ನು ಆಯೋಜಿಸಿದ್ದರು.

Share This
300x250 AD
300x250 AD
300x250 AD
Back to top