Slide
Slide
Slide
previous arrow
next arrow

ನ.29ಕ್ಕೆ ರಾಜು ಅಡಕಳ್ಳಿ ಬರೆದ ‘ವ್ಯಕ್ತಿ ಶಕ್ತಿ’ ಕೃತಿ ಲೋಕಾರ್ಪಣೆ

300x250 AD

ಶಿರಸಿ: ಹಿರಿಯ ಪತ್ರಕರ್ತ, ಅಂಕಣಕಾರ ರಾಜು ಅಡಕಳ್ಳಿ ಅವರು ವ್ಯಕ್ತಿ ಶಕ್ತಿ ಅಂಕಣದ ಸಂಕಲನ ನ.29ರಂದು ಸಂಜೆ 4.30 ಕ್ಕೆ ನಗರದ ನೆಮ್ಮದಿ ಆವಾರದ ರಂಗಧಾಮದಲ್ಲಿ ಬಿಡುಗಡೆ ಆಗಲಿದೆ.

ಕೃತಿ ಬಿಡುಗಡೆ‌ ಸಮಾರಂಭದಲ್ಲಿ ವಿದ್ಯಾವಾಚಸ್ಪತಿ ಕೆರೆಕೈ ಉಮಾಕಾಂತ ಭಟ್, ಜನಪ್ರಿಯ ಲೇಖಕ, ವಿಶ್ವವಾಣಿ ದೈನಿಕದ ಸಂಪಾದಕ ವಿಶ್ವೇಶ್ವರ ಭಟ್, ಲೋಕಧ್ವನಿಯ ಸಂಪಾದಕ ರಾಧಾಕೃಷ್ಣ ಭಡ್ತಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಉತ್ತರ ಕನ್ನಡದ ವಿವಿಧ ಕ್ಷೇತ್ರಗಳ ವಿಶಿಷ್ಟ ಸಾಧಕರ ಸಮಾಗಮದಂತೆ ಈ ಅಂಕಣಗಳ ಸಂಗ್ರಹ ಈಗ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಲೇಖಕ ಅಡಕಳ್ಳಿಯವರು ಪ್ರತಿ ವ್ಯಕ್ತಿಯನ್ನೂ ತಮ್ಮದೇ ಚಿಕಿತ್ಸಕ ನೋಟ, ಶೋಧ, ಭಾವ, ಅಂತಃಕರಣದಿಂದ ದಕ್ಕಿಸಿಕೊಂಡು, ಥೇಟು ಉತ್ತರ ಕನ್ನಡದ ಭಾಷೆಯ ಸೊಗಡು- ಸೊಗಸಿನಲ್ಲಿ ತಮ್ಮ ಅಂಕಣ ಬರಹಗಳನ್ನು ಅನೂಹ್ಯವಾಗಿ ಪ್ರಸ್ತುತಪಡಿಸಿದ್ದಾರೆ ಎಂದು ಹಿರಿಯ ಪತ್ರಕರ್ತರು, ಖ್ಯಾತ ಲೇಖಕರೂ ಆಗಿರುವ ವಿಶ್ವೇಶ್ವರ ಭಟ್ ಅವರು ಈ ಕೃತಿಯ ಬೆನ್ನುಡಿಯಲ್ಲಿ ಪ್ರಶಂಸಿಸಿದ್ದಾರೆ.

300x250 AD

ವಿಶ್ವವಾಣಿ ಪುಸ್ತಕ ಪ್ರಕಟಿಸಿರುವ ಈ ಪುಸ್ತಕವನ್ನು ಅಮೆಜಾನ್ ಮೂಲಕವೂ ಓದುಗರಿಗೆ ತರಿಸಿಕೊಳ್ಳಲು ವ್ಯವಸ್ಥೆಯಿರುವುದು ವಿಶೇಷವಾಗಿದೆ.

Share This
300x250 AD
300x250 AD
300x250 AD
Back to top