Slide
Slide
Slide
previous arrow
next arrow

ನ.25ಕ್ಕೆ ಸ್ವರ್ಣವಲ್ಲಿಯಲ್ಲಿ ಶ್ರೀಭಗವತ್ಪಾದ ಪ್ರಕಾಶನದ ರಜತ ಮಹೋತ್ಸವ

300x250 AD

ಶಿರಸಿ: ಧರ್ಮ, ಅಧ್ಯಾತ್ಮ, ಸಂಸ್ಕೃತಿ, ಪರಂಪರೆ, ಇತಿಹಾಸ, ಯೋಗ, ಆಯುರ್ವೇದ ಪರಿಚಯಿಸುವ ನಿಟ್ಟಿನಲ್ಲಿ ಜನ್ಮ ಪಡೆದ ಸೋಂದಾ‌ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪ್ರಮುಖ ಅಂಗ ಸಂಸ್ಥೆಯಾದ ಶ್ರೀಭಗವತ್ಪಾದ ಪ್ರಕಾಶನವು ರಜತ ವರ್ಷ ಸಂಭ್ರಮದಲ್ಲಿದೆ.
ನಗರದ ಯೋಗ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿದ ‌ಮಠದ ಆಡಳಿತ ಅಧ್ಯಕ್ಷ ವಿಘ್ನೇಶ್ವರ ಎನ್.ಹೆಗಡೆ ಬೊಮ್ಮನಳ್ಳಿ, ಪ್ರಕಾಶನದ ಕಾರ್ಯದರ್ಶಿ ಕಮಲಾಕರ ವಿ.ಭಟ್ಟ ಮಾಹಿತಿ ನೀಡಿ, ನವೆಂಬರ್ 25 ರಂದು‌ ಸ್ವರ್ಣವಲ್ಲೀಯ ಸುಧರ್ಮಾ ಸಭಾಂಗಣದಲ್ಲಿ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ರಜತ ಮಹೋತ್ಸವ ನಡೆಯಲಿದೆ ಎಂದರು.

ಬಹುಮುಖಿ ಕಾರ್ಯ:
ಪ್ರಕಾಶನದ ಮೂಲಕ ಶಾಶ್ವತ ಹಾಗೂ ಬಹುಮುಖಿ ಕಾರ್ಯ ಮಾಡುತ್ತಿರುವ ಶ್ರೀಭಗವತ್ಪಾದ ಪ್ರಕಾಶನ ಹಾಗೂ ಅದು ಪ್ರಕಟಿಸುವ ಸ್ವರ್ಣವಲ್ಲೀ ಪ್ರಭಾ ಆಧ್ಯಾತ್ಮಿಕ‌ ಮಾಸ ಪತ್ರಿಕೆ ಕೂಡ ರಜತ ವರ್ಷ ಕಾಲಘಟ್ಟದಲ್ಲಿದೆ. 1994ರ ನವೆಂಬರ 26ರಂದು ಸ್ವರ್ಣವಲ್ಲೀಯಲ್ಲಿ ನಡೆದಿದ್ದ ದಕ್ಷಿಣ ವಲಯ ವೇದ ಸಮ್ಮೇಳನದ ಸಂದರ್ಭದಲ್ಲಿ ಶ್ರೀಭಗವತ್ಪಾದ ಪ್ರಕಾಶನ ಅಸ್ತಿತ್ವಕ್ಕೆ‌ ಬಂದಿದ್ದು, ಅಲ್ಲಿಂದ ಇಲ್ಲಿಯವರೆಗೆ ನಿರಂತರವಾಗಿ ಸ್ವರ್ಣವಲ್ಲೀ ಪ್ರಭಾ ಆಧ್ಯಾತ್ಮ‌ ಪತ್ರಿಕೆ ಹಾಗೂ 130ಕ್ಕೂ ಅಧಿಕ ಕೃತಿಗಳನ್ನು ಕನ್ನಡ, ಆಂಗ್ಲ, ಸಂಸ್ಕೃತ ಭಾಷೆಗಳಲ್ಲಿ ಪ್ರಕಟಿಸಿದೆ.
ಶ್ರೀಭಗವತ್ಪಾದ ಪ್ರಕಾಶನ ಪ್ರಕಟಿಸಿದ ಸ್ವರ್ಣವಲ್ಲೀ ಶ್ರೀಗಳ ಗೀತಾಂತರಂಗ‌ ಕೃತಿ‌ ಮರಾಠಿ, ಆಂಗ್ಲ‌ ಭಾಷೆಗೂ ಭಾಷಾಂತರಗೊಂಡಿದೆ. ಇದೀಗ ಈ‌ ಕೃತಿ ಹಿಂದಿಗೂ ಭಾಷಾಂತರ ಆಗುತ್ತಿದೆ ಎಂದರು.

ಸಮ್ಮಾನ, ಗ್ರಂಥ ಬಿಡುಗಡೆ:
ನ.25ರಂದು ಮಧ್ಯಾಹ್ನ 3.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿ.ಆರ್. ಎಲ್ ಸಮೂಹ‌ ಸಂಸ್ಥೆಗಳ ಸಂಸ್ಥೆಗಳ ಮುಖ್ಯಸ್ಥ ಡಾ. ವಿಜಯ ಸಂಕೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೋ.ನಿರಂಜನ ವಾನಳ್ಳಿ, ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಸಂಯುಕ್ತ ಕರ್ನಾಟಕ ಆಡಳಿತಾಧಿಕಾರಿ, ಹಿರಿಯ ಪತ್ರಕರ್ತ ಮೋಹನ ಹೆಗಡೆ, ಶಿರಸಿ ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ, ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಯಲ್ಲಾಪುರ ಟಿಎಂಎಸ್ ಅಧ್ಯಕ್ಷ ನಾರಾಯಣ ಭಟ್ ಅಗ್ಗಾಶಿಕುಂಬ್ರಿ ಪಾಲ್ಗೊಳ್ಳಿದ್ದಾರೆ‌ ಎಂದರು.
ಇದೇ ಸಂದರ್ಭದಲ್ಲಿ ಹೊಳೆನರಸೀಪುರದ ಅಧ್ಯಾತ್ಮ ಪ್ರಕಾಶಕ್ಕೆ ಸನ್ಮಾನ ನಡೆಯಲಿದೆ. ಆಧ್ಯಾತ್ಮ ಪ್ರಕಾಶ ಪತ್ರಿಕೆಯ ಉಪ ಸಂಪಾದಕ ಲಕ್ಷ್ಮೀಶ ಭಟ್ಟ ಉಪಸ್ಥಿತರಿಲಿದ್ದಾರೆ.
ಇದೇ ವೇದಿಕೆಯಲ್ಲಿ ಸ್ವರ್ಣವಲ್ಲೀ ಪ್ರಭಾದ ರಜತಮಹೋತ್ಸವ ವಿಶೇಷ ಸಂಚಿಕೆ ರಜತ ಪ್ರಭಾ ಹಾಗೂ ಸ್ವರ್ಣವಲ್ಲೀ ಪ್ರಭಾದಲ್ಲಿ ಶ್ರಿಗಳು ಬರೆದ 300 ಲೇಖನಗಳನ್ನು ಒಳಗೊಂಡ 900 ಪುಟಗಳ ಸಂದೇಶ ಮಾಲಿಕಾ ಎಂಬ ಕೃತಿ ಲೋಕಾರ್ಪಣೆ ಆಗಲಿದೆ.

ಹಾಸಣಗಿ‌ ಸಂಗೀತ ಸಂಭ್ರಮ:
ಸಭಾ ಕಾರ್ಯಕ್ರಮದ ಬಳಿಕ ಹಿರಿಯ ಹಿಂದುಸ್ತಾನಿ ಗಾಯಕ ಪಂಡಿತ್ ಗಣಪತಿ ಭಟ್ಟ ಹಾಸಣಗಿ ಅವರ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ತಬಲಾದಲ್ಲಿ ಶ್ರೀಧರ ಮಾಂಡ್ರೆ, ಸಂವಾದಿನಿಯಲ್ಲಿ ಸತೀಶ ಭಟ್ಟ ಹೆಗ್ಗಾರ ಭಾಗವಹಿಸಲಿದ್ದಾರೆ ಎಂದರು. ಈ ವೇಳೆ ಯೋಗ ಮಂದಿರದ ಅಧ್ಯಕ್ಷ ಎಸ್.ಎನ್.ಭಟ್ಟ ಉಪಾಧ್ಯ ಇತರರು ಇದ್ದರು.

300x250 AD

ಪ್ರಕಾಶನದ ಮೈಲಿಗಲ್ಲು

  • 25 ವಸಂತಗಳ ಸಂಭ್ರಮದಲ್ಲಿ ಪ್ರಕಾಶನ
  • 130ಕ್ಕೂ ಅಧಿಕ ಮೌಲಿಕ ಗ್ರಂಥಗಳ ಬಿಡುಗಡೆ
  • ಆಧ್ಯಾತ್ಮ ಪತ್ರಿಕೆ‌ ನಿರಂತರ ಪ್ರಕಟ
  • ಪ್ರಕಾಶನದಿಂದ ಸಂಸ್ಕೃತ, ಕನ್ನಡ, ಆಂಗ್ಲ ಭಾಷೆಗೆ ಅನನ್ಯ ಕೊಡುಗೆ

ಭಗವತ್ಪಾದ ಪ್ರಕಾಶನ ಕಳೆದ‌ 25 ವರ್ಷಗಳಿಂದ ನಿರಂತರವಾಗಿ ಕಾರ್ಯ ಮಾಡುತ್ತಿದೆ. ಶ್ರೀಗಳ ಪೀಠಾರೋಹಣ ರಜತ ಸಂಭ್ರಮದಲ್ಲಿನ ಕೇವಲ 11 ತಿಂಗಳಲ್ಲಿ 25 ಪುಸ್ತಕಗಳನ್ನು ಬಿಡುಗಡೆಗೊಳಿದ್ದು ಕೂಡ ಐತಿಹಾಸಿಕ ದಾಖಲಾಗಿದೆ.

  • ಕೆ.ವಿ.ಭಟ್ಟ, ಕಾರ್ಯದರ್ಶಿ ಭಗವತ್ಪಾದ ಪ್ರಕಾಶನ, ಸ್ವರ್ಣವಲ್ಲೀ
Share This
300x250 AD
300x250 AD
300x250 AD
Back to top