Slide
Slide
Slide
previous arrow
next arrow

ಶಿರಸಿಯ ಪ್ರದೀಪ ಶೆಟ್ಟಿ ಸೇರಿ ಹಲವು ಪತ್ರಕರ್ತರಿಗೆ ‘ಕನ್ನಡ ಭೂಷಣ ಪುರಸ್ಕಾರ’

300x250 AD

ಶಿರಸಿ: ರಾಜ್ಯದ ಕ್ಷತ್ರೀಯ ಮರಾಠಾ ಸಮುದಾಯದ ಹಾಗೂ ಆ ಸಮುದಾಯಗಳ ಉಪ ಪಂಗಡಗಳಾದ ಕರ್ನಾಟಕ ಕ್ಷತ್ರೀಯ ಮರಾಠಾ ಮಹಾ ಒಕ್ಕೂಟದಿಂದ 50ನೇ ವರ್ಷದ ಕರ್ನಾಟಕ ನಾಮಕರಣದ ಸುವರ್ಣಮಹೋತ್ಸವದ ಅಂಗವಾಗಿ ಶಿರಸಿ ಕನ್ನಡ ಜನಾಂತರಂಗ ಪತ್ರಿಕೆಯ ವರದಿಗಾರ ಪ್ರದೀಪ ಶೆಟ್ಟಿ, ಸಿದ್ದಾಪುರದ ಜನಮಾದ್ಯಮ ಪತ್ರಿಕೆಯ ವರದಿಗಾರ ಕೆಕ್ಕಾರ ನಾಗರಾಜ ಭಟ್ ಸೇರಿದಂತೆ ಜಿಲ್ಲೆಯ ಹಲವು ಪತ್ರಕರ್ತರಿಗೆ, ಸಾಮಾಜಿಕ ಸಂಘಟನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಲವರಿಗೆ ಕನ್ನಡ ಭೂಷಣ ಪ್ರಶಸ್ತಿ ಪುರಸ್ಕಾರ ಪ್ರಕಟಗೊಂಡಿದೆ.

ನವೆಂಬರ್ 26, ರವಿವಾರದಂದು ಕನ್ನಡಿಗರ ಪ್ರಥಮ ರಾಜಧಾನಿ ಬನವಾಸಿಯಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯ ಕ್ಷತ್ರೀಯ ಮರಾಠಾ ಮಹಾ ಒಕ್ಕೂಟದ ರಾಜ್ಯದ್ಯಕ್ಷ ಶಾಮಸುಂದರ ಗಾಯಕವಾಡ ನೇತೃತ್ವದಲ್ಲಿ ವಿವಿಧ ಮಠಾದೀಶರುಗಳ ಹಾಗೂ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ವಿತರಿಸಿ, ಸನ್ಮಾನಿಸಿಲಾಗುತ್ತದೆ.

ಹೊನ್ನಾವರದ ನಾಗರೀಕ ಪತ್ರಿಕೆ ಸಂಪಾದಕ ಕರ್ಕಿ ಕೃಷ್ಣಮೂರ್ತಿ ಹೆಬ್ಬಾರ, ಭಟ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ವಿಷ್ಣು ದೇವಾಡಿಗ, ಕಾರವಾರದ ಕರಾವಳಿ ಮುಂಜಾವು ವರದಿಗಾರ ಪ್ರಶಾಂತ ಮಹಾಲೆ, ಬೆಂಗಳೂರಿನ ಮರಾಠ ಧ್ವನಿ ಕನ್ನಡ ಮಾಸಪತ್ರಿಕೆ ವರದಿಗಾರ ಮತ್ತು ಸಂತರ ಧ್ವನಿ ಪತ್ರಿಕೆ ಸಂಪಾದಕ ಪಾಂಡುರಂಗ ಪಾಟೀಲ, ಯಲ್ಲಾಪುರದ ಪತ್ರಕರ್ತರ ಸಂಘದ ಅಧ್ಯಕ್ಷ ಆನಗೋಡ ಕೆ.ಎಸ್. ಭಟ್ಟ, ಖಾನಾಪುರದ ಶ್ರೀಕಾಂತ ಕಾಕತಿಕರ, ಕಿತ್ತೂರಿನ ಚಂದ್ರಕಾಂತ ಐಭತ್ತಿ ಇವರುಗಳು ಮಾದ್ಯಮ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

300x250 AD

ಹಾಗೆಯೇ ಸಾಮಾಜಿಕ ಸಂಘಟನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾರವಾರದ ವಿಷ್ಣು ಹರಿಕಂತ್ರ, ಜನಾರ್ಧನ ಗಾಂವಕರ, ಪ್ರಕಾಶ ರಾಣೆ, ಕುಮಟಾದ ಹರೀಶ ಶೆಟ್ಟಿ ಗುಡಿಗಾರ, ಶಿರಸಿಯ ಜಿ.ಪಂ. ಮಾಜಿ ಸದಸ್ಯೆ ಶ್ರೀಮತಿ ಉಷಾ ಹೆಗಡೆ, ಜಿ.ಪಂ. ಮಾಜಿ ಉಪಾಧ್ಯಕ್ಷ ಮುಂಡಗೋಡದ ಎಲ್.ಟಿ. ಪಾಟೀಲ್, ಸೇರಿದಂತೆ ಇನ್ನೂ ಹಲವರಿಗೆ ಕನ್ನಡ ಭೂಷಣ ಪ್ರಶಸ್ತಿ ಪುರಸ್ಕಾರವನ್ನು ನೀಡಲಾಗುತ್ತದೆ ಎಂದು ರಾಜ್ಯ ಸಂಘಟನಾ ಕಾರ್ಯರ್ಶಿ ಪಾಂಡುರಂಗ ವಿ. ಪಾಟೀಲ್, ಹಾಗೂ ಜಿಲ್ಲಾ ಕಾರ್ಯದರ್ಶಿ ರಾಜೇಶ ಆರೇರ ಎಸಳೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top