ಯಲ್ಲಾಪುರ: ಅತಿ ಬರಗಾಲ ಪೀಡಿತ ಪ್ರದೇಶದಲ್ಲಿ ಮುಖ್ಯವಾಗಿ ಕುಡಿಯುವ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಸೋಮವಾರ ಪಟ್ಟಣದ ಆಡಳಿತ ಸೌಧದಲ್ಲಿ ಬರಗಾರ ನಿರ್ವಹಣೆ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಡಿಯುವ ನೀರಿಗೆ ಹಣಕಾಸಿನ ಕೊರತೆ ಇಲ್ಲ. ಮಾವಿನಕಟ್ಟಾ, ಹಾಸಣಗಿ, ಕಿರವತ್ತಿ, ಮದನೂರು, ಕಣ್ಣಿಗೇರಿ ಗ್ರಾ ಪಂ ಪಿಡಿಒಗಳು ಕುಡಿಯುವ ನೀರಿನ ಕೊರತೆ ನಿಭಾಯಿಸಲು ಕ್ರಮ ಕೈಗೊಳ್ಳಬೇಕು.
ಅಧಿಕಾರಿಗಳು ಊರು ಬಿಟ್ಟು ಹೋಗಬೇಡಿ. ಜನರಿಗೆ ಸಮಾಧಾನದ ಉತ್ತರ ನೀಡಿ. ಮಾನವೀಯ ನಡವಳಿಕೆ ಯಿಂದ ಕಾರ್ಯನಿರ್ವಹಿಸಿ ಜನಪರವಾಗಿ ಕೆಲಸಮಾಡಬೇಕು. ಅನಿವಾರ್ಯ ಆದರೆ ಮಾತ್ರ ಬೊರವೆಲ್ ಕೊರೆಸಿ.ಆದರೆ ಎಲ್ಲದಕ್ಕೂ ಹೊಸ ಬೊರವರಲ್ ತೆಗೆಯಲು ಹೋಗದೇ, ಪ್ಲೆಶಿಂಗ್ ಮಾಡಿಸಿ,ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಗೆ ಆಧ್ಯತೆ ನೀಡಿ ಸಿದ್ದವಾಗಿಟ್ಟುಕೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಕಾಯ್ದೆ ಪುಸ್ತಕ ಇಟ್ಟು ಕೆಲಸ ಮಾಡುದಾದರೆ ಕೊರ್ಟಿಗೆ ಹೋಗಿ. ಇಲ್ಲಿ ಜನಪ್ರತಿನಿಧಿಗಳ,ಸಾರ್ವಜನಿಕರ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಬೆಳೆ ವಿಮೆ ಸರಿಯಾಗಿ ರೈತರಿಗೆ ತಲುಪಿಸಬೇಕು. ಜಾನುವಾರುಗಳಿಗೆ ಕುಡಿಯುವ ನೀರು,ಮೇವು ಕೊರತೆ ಉಂಟಾಗದಂತೆ ಗಮನ ಹರಿಸಬೇಕು ಎಂದು ಸೂಚಿಸಿದರು.
ಜಿ ಪಂ ಮಾಜಿ ಸದಸ್ಯ ವಿಜಯ ಮಿರಾಶಿ,ಪ ಪಂ ಸದಸ್ಯರಾದ ಸುನಂದಾ ದಾಸ್, ಸತೀಶ ನಾಯ್ಕ,ಮಾವಿನಮನೆ ಗ್ರಾ ಪಂ ಅಧ್ಯಕ್ಷ ಸುಬ್ಬಣ್ಣ ಬೊಳ್ಮನೆ, ಸಹಾಯಕ ಆಯುಕ್ತ ದೇವರಾಜ, ತಹಶಿಲ್ದಾರ ಎಂ ಗುರುರಾಜ್, ಗ್ರೇಡ್ ೨ ತಹಶಿಲ್ದಾರ ಸಿ ಜಿ ನಾಯ್ಕ, ಇಒ ಜಗದೀಶ್ ಕಮ್ಮಾರ, ಕೃಷಿ ಇಲಾಖೆಯ ಎಡಿ ನಾಗರಾಜ ನಾಯ್ಕ,ಪಶುಸಂಗೋಪನೆ ಇಲಾಖೆಯ ಡಾ ಸುಬ್ರಾಯ ಭಟ್, ವಿವಿಧ ಇಲಾಖೆಯ ಅಧಿಕಾರಿಗಳು, ಪಿಡಿಒಗಳು ಭಾಗವಹಿಸಿದ್ದರು.