Slide
Slide
Slide
previous arrow
next arrow

ಕುಮಟಾ ವೈಭವದಿಂದ ಜಿಲ್ಲೆಯ ಕಲೆ, ಸಂಸ್ಕೃತಿಯ ಅನಾವರಣ: ಕಾಗೇರಿ

300x250 AD

ಕುಮಟಾ: ಮಂಜುನಾಥ ನಾಯ್ಕ ನೇತೃತ್ವದಲ್ಲಿ ನಡೆಯುತ್ತಿರುವ ಕುಮಟಾ ವೈಭವದಲ್ಲಿ ಜಿಲ್ಲೆಯ ಕಲೆ, ಸಂಸ್ಕೃತಿಯ ಶ್ರೀಮಂತಿಕೆಯನ್ನು ಅನಾವರಣಗೊಳಿಸಿದ್ದಾರೆ ಎಂದು ವಿಧಾನಸಭಾ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಂಡವ ಕಲಾನಿಕೇತನ ಸಂಸ್ಥೆ ಬೆಂಗಳೂರು ಮತ್ತು ಕುಮಟಾ ವೈಭವ ಸಮಿತಿಯಿಂದ ಪಟ್ಟಣದ ಮಣಕಿ ಮೈದಾನದಲ್ಲಿ ನಡೆಯುತ್ತಿರುವ ಕುಮಟಾ ವೈಭವ-2023ರ 3ನೇ ದಿನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂಥ ವೈಭವಯುತ ಕಾರ್ಯಕ್ರಮ ಸಂಘಟಿಸುವುದು ಸುಲಭದ ಮಾತಲ್ಲ. ಸಂಘಟನೆಯ ನೇತೃತ್ವ ಮತ್ತು ತಂಡದ ಶ್ರಮ ಸಮರ್ಪಕವಾಗಿದ್ದರೆ ಮಾತ್ರ ಕಾರ್ಯಕ್ರಮ ಯಶಸ್ವಿಗೊಳ್ಳಲು ಸಾಧ್ಯ. ಅಲ್ಲದೇ ಪ್ರತಿಯೊಬ್ಬರು ದೇಶಾಭಿಮಾನ ಬೆಳಸಿಕೊಳ್ಳಬೇಕು. ಆ ಮೂಲಕ ನಮ್ಮ ಭಾರತ ದೇಶ ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಸಾಗಿಸಲು ಸಾಧ್ಯ ಎಂದರು.

ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಅವರು ಮಾತನಾಡಿ, ಕುಮಟಾ ತಾಲೂಕು ಸಾಂಸ್ಕೃತಿಕ ನಗರಿಯಾಗಿದೆ. ಇಲ್ಲಿನ ಜನರಿಗೆ ಕಲೆ, ಸಂಸ್ಕೃತಿಯಲ್ಲಿ ಅಭಿರುಚಿ ಇದೆ. ಹಾಗಾಗಿ ಮಣಕಿ ಮೈದಾನದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಯಶಸ್ವಿಯಾಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವ ಮೂಲಕ ಆ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸುತ್ತಾರೆ. ಅದರಲ್ಲೂ ಮಂಜುನಾಥ ನಾಯ್ಕ ಅವರ ನೇತೃತ್ವದಲ್ಲಿ ನಡೆದ ಕುಮಟಾ ವೈಭವ ನಿಜಕ್ಕೂ ವೈಭವಭರತವಾಗಿರುವುದು ಖುಷಿಯ ವಿಚಾರ ಎಂದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ ಹಾಗೂ ನಾಟಕ ಕಲಾವಿದ ಕೃಷ್ಣಾನಂದ ಭಟ್ ಅವರನ್ನು ಸನ್ಮಾನಿಸಲಾಯಿತು.

300x250 AD

ತಾಂಡವ ಕಲಾನಿಕೇತನ ಅಧ್ಯಕ್ಷ ಮಂಜುನಾಥ ನಾಯ್ಕ, ವೈಭವ ಸಮಿತಿ ಅಧ್ಯಕ್ಷ ನಾಗರಾಜ ನಾಯಕ ತೋರ್ಕೆ, ಜಿಪಂ ಮಾಜಿ ಸದಸ್ಯೆ ಗಾಯತ್ರಿ ಗೌಡ, ಪುರಸಭೆ ಸದಸ್ಯರಾದ ಸುಶೀಲಾ ಗೋವಿಂದ ನಾಯ್ಕ, ವಿನಯಾ ಜಾರ್ಜ್, ಛಾಯಾ ವೆಂಗುರ್ಲೆಕರ್, ಲಕ್ಷ್ಮಿ ಚಂದಾವರ, ಸಮಿತಿಯ ನಿರಂಜನ ನಾಯ್ಕ, ನರಸಿಂಹ ಭಟ್ ಕಡತೋಕ, ರವಿ ಗಾವಡಿ ಇತರರಿದ್ದರು. ಶಿಕ್ಷಕ ಮಂಜುನಾಥ ನಾಯ್ಕ ನಿರೂಪಿಸಿದರು, ರವಿ ಶೇಟ್ ವಂದಿಸಿದರು. ಟೀಮ್ ವಾರಿಯರಸ್ ಸದಸ್ಯರು ಸಹಕರಿಸಿದರು.

ಸಭಾ ಕಾರ್ಯಕ್ರಮದ ನಂತರ ನಡೆದ ರಷ್ಯನ್ ಕಲಾವಿದರಿಂದ ಪ್ರದರ್ಶನಗೊಂಡ ಬೆಲ್ಲಿ ಡ್ಯಾನ್ಸ್ ಪ್ರೇಕ್ಷಕರ ಗಮನ ಸೆಳೆಯಿತು. ಅದರಂತೆ ದೂರದರ್ಶನ ಚಂದನ ಟಿವಿಯಲ್ಲಿ ಕಾರ್ಯಕ್ರಮ ನೀಡಿದ ಖ್ಯಾತ ತಬಲ ವಾದಕ ನವೀನ ಶೇಟ ನೇತ್ರತ್ವದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ಮತ್ತು ಕಲರ್ಸ್ ಕನ್ನಡ ಖ್ಯಾತಿಯ ಕಲಾವತಿ ಹಾಗೂ ರಾಕಿಂಗ್ ಸ್ಟಾರ್ ಅಮೃತ ಕಶ್ಯಫ್, ಗಾಯಕ ವಿನೂಷ ಭಾರಧ್ವಾಜ ಅವರಿಂದ ನಡೆದ ರಸಮಂಜರಿ ಕಾರ್ಯಕ್ರಮ ಮಣಿಕಿ ಮೈದಾನದಲ್ಲಿ ಮೆರೆದ ಸಾವಿರಾರು ಪ್ರೇಕ್ಷಕರನ್ನು ರಂಜಿಸಿತು.

Share This
300x250 AD
300x250 AD
300x250 AD
Back to top