Slide
Slide
Slide
previous arrow
next arrow

ಕನ್ನಡ ಗಟ್ಟಿಗೊಳಿಸಿದ ಕೀರ್ತಿ ಕರಾವಳಿಯದ್ದು: ಡಾ.ಎನ್.ಆರ್.ನಾಯಕ

300x250 AD

ಹೊನ್ನಾವರ: ರಾಜ್ಯದಲ್ಲಿ ಕನ್ನಡವನ್ನು ಪರಿಶುದ್ಧವಾಗಿ ಇನ್ನಷ್ಟು ಗಟ್ಟಿಗೊಳಿಸಿದ ಕೀರ್ತಿ ಕರಾವಳಿ ಜನತೆಗೆ ಸಲ್ಲುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಡಾ.ಎನ್.ಆರ್.ನಾಯಕ ಅಭಿಪ್ರಾಯಪಟ್ಟರು.

ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಕನ್ನಡ ಕಾರ್ತಿಕ ಒಂದು ದಿನದ ವಿಚಾರ ಸಂಕೀರ್ಣ ಕನ್ನಡ ಭಾಷಾ ಅಭಿವೃದ್ದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರಾವಳಿಯ ಜನಸಾಮನ್ಯರು, ಜನಪದ ಕಲಾವಿದರು, ಯಕ್ಷಗಾನ ಕಲಾವಿದರು ಶುದ್ದ ಕನ್ನಡವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ ಎಂದರು.

ಕರವೇ ತಾಲೂಕ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ ವೇದಿಕೆಯಲ್ಲಿ ಮಾತನಾಡುವುದರಿಂದ ಮಾತ್ರ ಕನ್ನಡ ಬೆಳೆಯುವುದಿಲ್ಲ, ಆಚರಣೆಯಲ್ಲಿ ತರಬೇಕು, ತಪ್ಪನ್ನು ಖಂಡಿಸಬೇಕು ಎಂದರು. ಉಪನ್ಯಾಸಕ ಶಂಕರ ಗೌಡ  ಮಾತನಾಡಿ ಕನ್ನಡ ಹೃದಯದಿಂದ ಬರಬೇಕು ಭಾಷೆಯ ಅನಿವಾರ್ಯ ಸೃಷ್ಟಿಯಾಗಬೇಕಿದೆ ಎಂದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯೆ  ಡಾ ಶಿಲ್ಪ ಎಚ್.ಆರ್. ಮಾತನಾಡಿ ಕರ್ನಾಟಕದಲ್ಲಿ ಶೇಕಡಾ 55ರಷ್ಟು ಜನ ಕನ್ನಡ ಮಾತನಾಡುತ್ತಾರೆ. ಕನ್ನಡಕ್ಕೆ ಮೊದಲ ಆದ್ಯತೆ ನೀಡಿ ದಿನನಿತ್ಯ ಬಳಕೆ ಮಾಡಿದಲ್ಲಿ ಕನ್ನಡ ಬೆಳೆಯುತ್ತದೆ ಎಂದರು.

ಕಸಾಪ ತಾಲೂಕ ಅಧ್ಯಕ್ಷ ಎಸ್.ಎಚ್.ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಕಾರ್ತಿಕದ ಪರಿಚಯಿಸಿ ಕನ್ನಡದ ಅಭಿವೃದ್ಧಿಗೆ ಸರ್ಕಾರ, ಸಂಘಟನೆ, ಜನರು ಭಾಗಿಗಳಾಗಬೇಕು ಎಂದರು ಕಾರ್ಯಕ್ರಮದಲ್ಲಿ ನಾರಾಯಣ ಹೆಗಡೆ, ಮಹೇಶ್ ಭಂಡಾರಿ ಜೀನತ್ ಕಣವಿ ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top