Slide
Slide
Slide
previous arrow
next arrow

ಕರ್ಕಿ ಸಣ್ಣ ಹೆಗಡೆಮನೆ ಕೇರಿಯಲ್ಲಿ ಮನೆಗೆ ಕನ್ನ: ಲಕ್ಷಾಂತರ ಮೌಲ್ಯದ ನಗನಾಣ್ಯ ದೋಚಿ ಪರಾರಿ

300x250 AD

ಹೊನ್ನಾವರ : ತಾಲೂಕಿನ ಕರ್ಕಿ ಗ್ರಾಮದ ಸಣ್ಣ ಹೆಗಡೆಮನೆ ಕೇರಿಯಲ್ಲಿ ಮನೆ ಬೀಗವನ್ನು ಮುರಿದು ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಮತ್ತು ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಇತ್ತೀಚಿಗೆ ನಡೆದಿದೆ.

ಪರಮೇಶ್ವರ ತಿಮ್ಮಣ್ಣ ಭಟ್ಟರವರ ಮನೆಯಲ್ಲಿ ಬಾಡಿಗೆಗೆ ಇದ್ದ ಗೌರೀಶ ಗಣಪತಿ ಭಟ್ಟ ಇವರು ಮನೆಯಲ್ಲಿ ಇರದೇ ಇರುವ ಸಮಯ ನೋಡಿ ಕಳ್ಳರು ಕಳ್ಳತನ ಮಾಡಿದ್ದಾರೆ. ವೈದಿಕ ವೃತ್ತಿ ಮಾಡಿಕೊಂಡಿರುವ ಗೌರೀಶ ಭಟ್ಟ ಮಗಳು ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರ ಪತ್ನಿ ಕೂಡ ಮಗಳೊಂದಿಗೆ ಬೆಂಗಳೂರಿನಲ್ಲಿದ್ದಾರೆ. ಇವರು ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಹೋಗಿದ್ದರು.

ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ 3.80 ಲಕ್ಷ ನಗದು, 15 ಸಾವಿರ ಮೊತ್ತದ ಬೆಳ್ಳಿ, 3.60 ಲಕ್ಷ ಮೊತ್ತದ ಬಂಗಾರ ಒಟ್ಟು 6.83 ಲಕ್ಷದ ನಗನಾಣ್ಯ ಕಳ್ಳತನ ಮಾಡಿ ಪರಾರಿ ಆಗಿದ್ದಾರೆ. ಮರುದಿನ ಬೆಳಿಗ್ಗೆ ಸ್ಥಳೀಯರೊಬ್ಬರು ನೋಡಿದಾಗ, ಮನೆ ಬಾಗಿಲು ತೆರೆದಿದ್ದು, ಮನೆ ಬಾಡಿಗೆ ಇದ್ದವರು ಬಂದಿದ್ದಾರೆ ಎಂದು ತಿಳಿದು ತಮ್ಮ ಕೆಲಸಕ್ಕೆ ತೆರಳಿದಿದ್ದರು, ನಂತರ ವಾಪಾಸ್ ಆಗುವಾಗ ಮನೆಯವರನ್ನು ಕರೆದಾಗ ಯಾರು ಇರದೇ ಇರುವುದು ಮತ್ತು ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.

300x250 AD

ಘಟನೆಗೆ ಸಂಬಂಧ ಪಟ್ಟಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top