
ಶಿರಸಿ: ನನ್ನನ್ನು ನಾನು ಗುರುತಿಸಿಕೊಳ್ಳುವದಕ್ಕೆ ಯಕ್ಷಗಾನ ಒಳ್ಳೆಯ ಮಾಧ್ಯಮ ಎಂದು ಮಂಜುಗುಣಿಯ ಶ್ರೀವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ಹೇಳಿದರು.
ಅವರು ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಶಬರ ಸಂಸ್ಥೆ ಸೋಂದಾ ಹಾಗೂ ಶ್ರೀ ವೇಂಕಟರಮಣ ದೇವಸ್ಥಾನ ಮಂಜುಗುಣಿ ಅವರ ಸಹಯೋಗದಲ್ಲಿ ಯಕ್ಷ ದೀಪಾವಳಿ ಕಾರ್ಯಕ್ರಮ ಉದ್ಘಾಟಕರಾಗಿ ಮಾತನಾಡಿದರು.
ಯಕ್ಷಗಾನವನ್ನು ಆಸ್ವಾದಿಸಬೇಕು. ಕಲೆಯನ್ನು ನೋಡುವುದು ಬೇರೆ, ಆವಾಹಿಸುವುದು ಬೇರೆ ಎಂದರು. ಅತಿಥಿಗಳಾಗಿ ಆಗಮಿಸಿದ ಸಾಮಾಜಿಕ ಕಾರ್ಯಕರ್ತ ಎಸ್.ಕೆ.ಭಾಗವತ ಶಿರಸಿಮಕ್ಕಿ ಮಾತನಾಡಿ, ಯಕ್ಷಗಾನ ಭಾರತೀಯ ಕಲೆಗಳಲ್ಲಿ ಅತ್ಯಂತ ಶ್ರೀಮಂತ ಕಲೆ ಎಂದರು. ಹಿರಿಯ ಮದ್ದಲೆವಾದಕರಾದ ಶ್ರೀಪತಿ ಹೆಗಡೆ ಕಂಚಿಮನೆ ಹಾಗೂ ಹಿರಿಯ ನಾಟೀ ವೈದ್ಯ ಗೋವಿಂದ ಮರಾಠಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಾರಾಯಣ ಹೆಗಡೆ ಮಾವಿನಕೊಪ್ಪ ಉಪಸ್ಥಿತರಿದ್ದರು. ನಾಗರಾಜ ಜೋಶಿ ಸೋಂದಾ ಸ್ವಾಗತಿಸಿದರು. ಕರುಣಾಕರ ಹೆಗಡೆ ಕಲ್ಲಳ್ಳಿ ನಿರ್ವಹಣೆ ಮಾಡಿದರು. ಭುವನೇಶ್ವರಿ ಹೆಗಡೆ ವಂದಿಸಿದರು.
ನಂತರ ನಡೆದ ವೀರ ಬರ್ಭರೀಕ ಯಕ್ಷಗಾನದಲ್ಲಿ ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವತರಾದ ಚಂದ್ರಕಾಂತ ಮೂಡುಬೆಳ್ಳೆ, ಮಂಜುನಾಥ ಹೆಗಡೆ ಕಂಚೀಮನೆ, ಪ್ರಸನ್ನ ಹೆಗ್ಗಾರ್ ಸಹಕರಿಸಿದರು. ಪಾತ್ರಧಾರಿಗಳಾಗಿ ಶ್ರೀಧರ ಹೆಗಡೆ ಚಪ್ಪರಮನೆ, ರಾಜೇಶ ಭಂಡಾರಿ ಗುಣವಂತೆ, ಚಂದ್ರಹಾಸ ಗೌಡ ಗುಣವಂತೆ, ಸನ್ಮಯ ಭಟ್ಟ ಮಳವಳ್ಳಿ, ಮಂಜುನಾಥ ಗಾಂವ್ಕರ್ ಮೂಲೆಮನೆ, ನಾಗರಾಜ ಕುಂಕಿಪಾಲ್, ದೀಪಕ ಕುಂಕಿ ಪ್ರೇಕ್ಷಕರನ್ನು ರಂಜಿಸಿದರು. ಸ್ಥಳೀಯವಾಗಿ ಯಕ್ಷಾಭಿಮಾನಿ ಕಲಾಬಳಗ ಮಂಜುಗುಣಿ ಪದಾಧಿಕಾರಿಗಳು ಸಹಕರಿಸಿದರು.