ಕುಮಟಾ: ಇಲ್ಲಿಯ ರೋಟರಿ ಕ್ಲಬ್ ಆಶ್ರಯದಲ್ಲಿ, ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕುಮಟಾ ತಾಲೂಕಾ ಮಟ್ಟದ ಆಶುಭಾಷಣ ಸ್ಪರ್ಧೆಯನ್ನು ನ.16 ರಂದು, ಬೆಳಿಗ್ಗೆ 11 ಗಂಟೆಗೆ ಸರಸ್ವತಿ ಪದವಿಪೂರ್ವ ಕಾಲೇಜು ವಿದ್ಯಾಗಿರಿ ಬಗ್ಗೋಣದಲ್ಲಿ ಏರ್ಪಡಿಲಾಗಿದೆ. ವಿಧಾತ್ರಿ ಅಕಾಡೆಮಿ ಸಹಯೋಗದಲ್ಲಿ ನಡೆಯಲ್ಪಡುವ ಈ ಸ್ಪರ್ಧಾ ಕಾರ್ಯಕ್ರಮದ ಬಹುಮಾನದ ಪ್ರಾಯೋಜಕತ್ವವನ್ನು ಶ್ರೀ ವಿಘ್ನೇಶ ಮತ್ತು ಶ್ರೀ ಗಣೇಶ ಏಜೆನ್ಸೀಸ್ ಕುಮಟಾ ವಹಿಸಲಿದ್ದು, ಸ್ಪರ್ಧೆಯು 3 ರಿಂದ 4 ನಿಮಿಷ ಕಾಲಾವಕಾಶದಿದ್ದು, ಒಂದು ಪ್ರೌಢಶಾಲೆಯಿಂದ ಗರಿಷ್ಠ 2 ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.
ಭಾಷಾ ಶುದ್ಧಿ, ಭಾಷಾ ಪ್ರವಾಹ, ಭಾವ, ವಿಷಯ ಸಂಗ್ರಹಣೆ, ಸಾಮಾನ್ಯ ಪ್ರಭಾವ (ವಿಷಯ ಮಂಡನೆ, ಮಾತಿನ ವೈಖರಿ, ನಿರರ್ಗಳತೆ, ಭಾಷೆಯ ಸ್ಪಷ್ಟತೆ ಮತ್ತು ಪ್ರಸ್ತುತ ಪಡಿಸುವ ರೀತಿ)ಗೆ ಪ್ರಾಶಸ್ತ್ಯ ನೀಡಲಾಗುವುದು. ಪ್ರವೇಶ ಉಚಿತವಾಗಿದ್ದು, ಭಾಗವಹಿಸುವ ವಿದ್ಯಾರ್ಥಿಗಳು (Tel:+919741472378, Tel:+919448105328) ತಮ್ಮ ಹೆಸರನ್ನು ಸಂಪರ್ಕಿಸಿ ನೊಂದಾಯಿಸಿಕೊಳ್ಳಬೇಕೆಂದು ರೋಟರಿ ಕಾರ್ಯದರ್ಶಿ ರಾಮದಾಸ ಗುನಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.