Slide
Slide
Slide
previous arrow
next arrow

ಶಿರಸಿ ರೋಟರಿ ಕ್ಲಬ್‌ನಿಂದ ಕರಿಯರ್ ಗೈಡೆನ್ಸ್ ಕಾರ್ಯಕ್ರಮ

300x250 AD

ಶಿರಸಿ: ರೋಟರಿ ಕ್ಲಬ್ ಶಿರಸಿ ಮತ್ತು ಸಿ.ಎಸ್. ಚಾಪ್ಟರ್ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಶುಕ್ರವಾರ ಶಿರಸಿಯ ಐದು ವಿವಿಧ ಕಾಲೇಜುಗಳಲ್ಲಿ 2600 ಹೆಚ್ಚಿನ ವಾಣಿಜ್ಯ ವಿಷಯದ ವಿದ್ಯಾರ್ಥಿಗಳಿಗೆ ಕರಿಯರ್ ಗೈಡೆನ್ಸ್ ಕಾರ್ಯಕ್ರಮವನ್ನು ನಡೆಸಲಾಯಿತು. 

ನಗರದ ಎಂಇಎಸ್  ಪಿಯು ಕಾಲೇಜ್, ಚೈತನ್ಯ ಕಾಲೇಜ್, ಎಮ್.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯ, ಮಾರಿಕಾಂಬಾ ಪಿಯು ಕಾಲೇಜ್, ಸರಕಾರಿ ಡಿಗ್ರಿ ಕಾಲೇಜ್‌ಗಳಲ್ಲಿ ಕರಿಯರ್ ಗೈಡೆನ್ಸ್  ಕಾರ್ಯಕ್ರಮ ನಡೆಯಿತು.

300x250 AD

ಬೆಂಗಳೂರಿನ ಸಿಎಸ್ ಚಾಪ್ಟರ್ ಅಧ್ಯಕ್ಷ ಪರಮೇಶ್ವರ್ ಭಟ್ ಕಾರ್ಯಕ್ರಮದ ಮುಂದಾಳತ್ವವನ್ನು ವಹಿಸಿದ್ದರು. ಹತ್ತಕ್ಕೂ ಹೆಚ್ಚಿನ ವೃತ್ತಿಪರ ಕಂಪನಿ ಸೆಕ್ರೆಟರಿಗಳು, ವಿದ್ಯಾರ್ಥಿಗಳಿಗೆ ಸಿ ಎಸ್ ಕೋರ್ಸ್ ಮತ್ತು ಅವಕಾಶಗಳ ಬಗ್ಗೆ ಅರಿವು ಮೂಡಿಸಿದರು. ಎಲ್ಲ ಕಾಲೇಜಿನ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ದೊರೆಯಿತು ಎಂದು ಕಾರ್ಯಕ್ರಮದ ಸಂಯೋಜಕರ ಪರವಾಗಿ ಶಿರಸಿ ರೋಟರಿ ಕ್ಲಬ್ ಕಾರ್ಯದರ್ಶಿ ಗಣಪತಿ ಹೆಗಡೆ ತಿಳಿಸಿದರು.

Share This
300x250 AD
300x250 AD
300x250 AD
Back to top