Slide
Slide
Slide
previous arrow
next arrow

ನಾಡಬಾಂಬ್ ತಯಾರಿಸುತ್ತಿದ್ದ ವ್ಯಕ್ತಿಯ ಸೆರೆ

300x250 AD

ಜೊಯಿಡಾ: ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಸು ಗ್ರಾಮದ ಅರಣ್ಯ ಪ್ರದೇಶದಲ್ಲಿ ಜಿಲೆಟಿನ್‌ನಿಂದ ತಯಾರಿಸಿದ 55 ಸಜೀವ ನಾಡ ಬಾಂಬ್‌ಗಳನ್ನು ರಾಮನಗರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಾಡಬಾಂಬ್‌ಗಳನ್ನು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದು ರಾಮನಗರ ಪೋಲೀಸರು ದಾಳಿ ನಡೆಸಿ ಶಿವಮೊಗ್ಗ ಮೂಲದ ರಜಪೂತ್ ರಾಜ್ ಸಿಂಗ್ ಎನ್ನುವಾತನನ್ನು ಬಂಧಿಸಿದ್ದಾರೆ. ಪೊಲೀಸರನ್ನು ಕಂಡ ಈತ ನಾಡಬಾಂಬ್‌ಗಳಿದ್ದ ಚೀಲವನ್ನು ಅರಣ್ಯದಲ್ಲಿ ಮುಚ್ಚಿಟ್ಟು ಏನೂ ಗೊತ್ತಿಲ್ಲದವನಂತೆ ನಡೆದು ಹೋಗುತ್ತಿರುವ ಸಂದರ್ಭದಲ್ಲಿ ಪೊಲೀಸರು ಈತನನ್ನು ವಶಕ್ಕೆ ಪಡೆದು, ಈತನ ವಿಚಾರಣೆ ನಡೆಸಿ, ನಾಡಬಾಂಬ್‌ಗಳಿದ್ದ ಚೀಲವನ್ನು ವಿಧ್ವಂಸಕ ಕೃತ್ಯ ತಪಾಸಕ ತಂಡ ಕಾರವಾರರವರ ಸಮಕ್ಷಮ ಪರಿಶಿಲಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

300x250 AD

ದಾಳಿಯಲ್ಲಿ ಪಿಎಸ್‌ಐ ಬಸವರಾಜ ಮಬನೂರ, ಪಿಎಸ್‌ಐ ಕೃಷ್ಣಕಾಂತ ಪಾಟೀಲ, ಸಿಬ್ಬಂದಿಗಳಾದ ನಾಮದೇವ ಕಂಕಾಳಿ, ಉಮೇಶ ದ್ಯಾಮಣ್ಣವರ್, ಹಾಲಪ್ಪ ಬಾಗಿ, ಸದಾಶಿವ ಮತ್ತು ಈರಣ್ಣ ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top