Slide
Slide
Slide
previous arrow
next arrow

ಸದೃಢ ಆರೋಗ್ಯಕ್ಕೆ ಆಯುರ್ವೇದ ಪದ್ಧತಿ ಭದ್ರ ಬುನಾದಿ: ಡಾ.ಆರ್.ಕೆ. ಕುಲಕರ್ಣಿ

300x250 AD

ದಾಂಡೇಲಿ: ಸದೃಢ ಆರೋಗ್ಯಕ್ಕೆ ಆಯುರ್ವೇದ ಪದ್ಧತಿ ಭದ್ರ ಬುನಾದಿ.  ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸುಗಮ ಆರೋಗ್ಯದೊಂದಿಗೆ ಜೀವಿಸಲು ಆಯುರ್ವೇದ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದು ಹಿರಿಯ ವೈದ್ಯರಾದ ಡಾ.ಆರ್.ಕೆ.ಕುಲಕರ್ಣಿ ಹೇಳಿದರು.

ಅವರು ಶುಕ್ರವಾರ ಸಂಜೆ ನಗರದ ರೋಟರಿ ಶಾಲೆಯ ಸಭಾಭವನದಲ್ಲಿ ಆರೋಗ್ಯ ಭಾರತಿ ಸಂಸ್ಥೆಯ ಆಶ್ರಯದಡಿ ನಡೆದ ಧನ್ವಂತರಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಆಯುರ್ವೇದ ಪದ್ಧತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಳವಡಿಸಿಕೊಳ್ಳುತ್ತಿದ್ದರು. ಹಳೆಯ ಕಾಲದ ಆಯುರ್ವೇದ ಪದ್ಧತಿಯನ್ನು ಎಂದಿಗೂ ಮರೆಯಬಾರದು. ನಮ್ಮ ಉತ್ತಮ ಆರೋಗ್ಯಕ್ಕೆ ಆಯುರ್ವೇದ ಪದ್ಧತಿ ಬಹು ಮುಖ್ಯ ಅಂಶವಾಗಿರುತ್ತದೆ. ಪ್ರತಿಯೊಬ್ಬರು ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು. ಪ್ರತಿನಿತ್ಯ ಯೋಗವನ್ನು ಅಭ್ಯಾಸ ಮಾಡಬೇಕು. ಸುಸಂಸ್ಕೃತ ಜೀವನ ನಡವಳಿಕೆಗಳನ್ನು ಮೈಗೂಡಿಸಿಕೊಂಡು ನಡೆದಾಗ ಸಮೃದ್ಧ ಮತ್ತು ಸದೃಢ ಆರೋಗ್ಯ ನಿರ್ಮಾಣ ಸಾಧ್ಯ ಎಂದರು.

ಆರೋಗ್ಯ ಸಮಿತಿಯ ಅಧ್ಯಕ್ಷ ಸುಧಾಕರ್ ಶೆಟ್ಟಿ, ಯೋಗದಿಂದಲೇ ಋಷಿ ಮುನಿಗಳು ಆಹಾರವಿಲ್ಲದೆ ಅನೇಕ ದಿನಗಳವರೆಗೆ ಜೀವಿಸಿರುವುದನ್ನು ನಾವು ಓದಿ ತಿಳಿದುಕೊಂಡಿದ್ದೇವೆ.  ಸ್ವಯಂ ಪ್ರೇರಿತರಾಗಿ ಯೋಗ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು. ಯೋಗಿಯಾದವನಿಗೆ ಮಾತ್ರ ಯೋಗ ಒಲಿಯುತ್ತದೆ ಎಂದ ಅವರು ಆರೋಗ್ಯ ಭಾರತಿ ಸಂಸ್ಥೆಯು ಸರ್ವ ಜನರ ಆರೋಗ್ಯದ ಒಳಿತಿಗಾಗಿ ಮತ್ತು ಆರೋಗ್ಯದ ಸಂರಕ್ಷಣೆಗಾಗಿ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದರು.

300x250 AD

ಹಿರಿಯ ಮುಖಂಡ ವಾಸುದೇವ ಪ್ರಭು ಅವರು ಆರೋಗ್ಯ ಭಾರತಿ ಸಂಸ್ಥೆಯ ಧ್ಯೇಯೋದ್ದೇಶ ಮತ್ತು ಕಾರ್ಯ ವೈಖರಿಗಳ ಬಗ್ಗೆ ವಿವರಣೆಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೇಖಾ ಹೆಗಡೆಯವರು ಧನ್ವಂತರಿ ಜಯಂತಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ವೇದಿಕೆಯಲ್ಲಿ ನಗರದ ವೈದ್ಯರಾದ ಡಾ.ಶೇಖರ್ ಹಂಚಿನಾಳಮಠ, ರೋಟರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಲಿಯೋ ಪಿಂಟೋ ಅವರು ಉಪಸ್ಥಿತರಿದ್ದರು. ನಗರದ ಹಿರಿಯ ವೈದ್ಯರಾದ ಡಾ.ಆರ್.ಕೆ. ಕುಲಕರ್ಣಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವರದಾ ಜೋಶಿಯವರು ಸ್ವಾಗತಿಸಿದರು. ಸುರೇಶ್ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Share This
300x250 AD
300x250 AD
300x250 AD
Back to top