Slide
Slide
Slide
previous arrow
next arrow

ಕಲಾ ಅನುಬಂಧ :ವಿ.ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ, ವಿದುಷಿ ವಸುಧಾ ಶರ್ಮಾಗೆ ಸನ್ಮಾನ

300x250 AD

ಶಿರಸಿ: ನಗರದ ಯೋಗಮಂದಿರ ಸಭಾಭವನದಲ್ಲಿ ಸ್ಥಳೀಯ ರಾಗಮಿತ್ರ ಪ್ರತಿಷ್ಠಾನವು ಪ್ರತಿ ತಿಂಗಳ ಮೊದಲ ಸೋಮವಾರದಂದು ಸಂಘಟಿಸುತ್ತಿರುವ ಗುರು ಅರ್ಪಣೆ ಹಾಗು ಕಲಾ ಅನುಬಂಧ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ತಬಲಾ ವಾದಕ ವಿ.ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ ಹಾಗೂ ಗಾಯಕಿ ವಿದುಷಿ ವಸುಧಾ ಶರ್ಮಾ ಸಾಗರ ಅವರನ್ನು ಹೃದಯಸ್ಪರ್ಶಿಯಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಛೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಬಿ.ಲೋಕೇಶ ಹೆಗಡೆ ಕಲಾವಿದರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಈ ವೇಳೆ ಮಾತನಾಡಿ, ಇಂದಿನ ವಾತಾವರಣದಲ್ಲಿ ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡುವ ಕೆಲಸವಾಗಬೇಕು. ತನ್ಮೂಲಕ ಏಕಾಗ್ರತೆ ಮೂಡಿಸಬೇಕಿದೆ. ಇವೆಲ್ಲದಕ್ಕೂ ಸಹಕಾರಿಯಾಗಬಲ್ಲ ಪಥ ಶಾಸ್ತ್ರೀಯ ಕಲಾ ಪ್ರಕಾರಗಳು. ಇದನ್ನು ಅಭ್ಯಾಸ ಮಾಡಿಸುವುದು ಪಾಲಕರ ಜವಾಬ್ದಾರಿಯಾಗಿದೆ. ಇದರಿಂದ ಆಯಾ ವ್ಯಕ್ತಿಗಳಲ್ಲಿರುವ ಪ್ರತಿಭೆ ಹೊರಹೊಮ್ಮುವುದಕ್ಕೆ ಅವಕಾಶ ಆಗುತ್ತದೆ ಎಂದರು. ಅತಿಥಿಯಾಗಿದ್ದ ಪ್ರದೀಪ ಜ್ಯುವೇಲರಿ ಮಾಲಕ ಪ್ರದೀಪ ಎಲ್ಲನಕರ್ ಹಾಡಿನ ಮೂಲಕ ಗಮನಸೆಳೆದರು.

ಸನ್ಮಾನ ಸ್ವೀಕರಿಸಿದ ತಬಲಾ ವಾದಕ ವಿ.ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ ಮಾತನಾಡಿ, ಇತರ ಕ್ಷೇತ್ರಗಳಂತೆ ಸಂಗೀತ ಕ್ಷೇತ್ರವೂ ಕಮರ್ಷಿಯಲ್ ಆಗಿ ಬೆಳೆಯುತ್ತಿರುವುದು ನೋವಿನ ಸಂಗತಿ. ಅನುಭವಿ ಕಲಾವಿದರಿಂದ ಯುವ ಪೀಳಿಗೆ ಸರಿಯಾದ ಮಾರ್ಗದರ್ಶನ ಹಾಗೂ ಆಸಕ್ತಿಯಿಂದ ಅಭ್ಯಸಿಸುವ ವ್ಯವಸ್ಥೆ ಬರಬೇಕಾಗಿದೆ ಎಂದರು. ರಾಗಮಿತ್ರ ಪ್ರತಿಷ್ಠಾನದ ಅಧ್ಯಕ್ಷ ಎಂ.ಎನ್.ಹೆಗಡೆ ಮಾಳೇನಳ್ಳಿ, ಮಾತೃಮಂಡಳಿಯ ಭಾರತಿ ಹೆಗಡೆ ಮುಂತಾದವರು ಉಪಸ್ಥಿತರಿದ್ದರು. ಸಂಗೀತಾಭಿಮಾನಿ ಆರ್.ಎನ್.ಭಟ್ಟ ಸುಗಾವಿ ಅಧ್ಯಕ್ಷತೆ ವಹಿಸಿದ್ದರು.

300x250 AD

ಕಲಾ ಅನುಬಂಧ ಸಂಗೀತ ಕಾರ್ಯಕ್ರಮದ ಆರಂಭದಲ್ಲಿ ಯೋಗಮಂದಿರದ ಮಾತೃಮಂಡಳಿಯವರು ಜನಪ್ರಿಯ ಭಜನೆಗಳನ್ನು ಹಾಡಿ ಮೆರಗು ತಂದರು. ನಂತರ ಗಾಯಕಿ ಶ್ರೀರಂಜಿನಿ ಎಚ್.ಸಿ ಸಾಗರ ರಾಗ್ ಪೂರಿಯಾ ಧನಶ್ರೀ ಹಾಗೂ ಭಕ್ತಿಗೀತೆಗಳನ್ನು ಹಾಡಿ ಮೆಚ್ಚುಗೆಗೆ ಪಾತ್ರರಾದರು. ತಬಲಾದಲ್ಲಿ ಕಿರಣ ಹೆಗಡೆ ಕಾನಗೋಡ, ಹಾರ್ಮೊನಿಯಂನಲ್ಲಿ ಸಂವತ್ಸರ ಸಾಗರ ಸಾಥ್ ನೀಡಿದರು.
ತದನಂತರ ಆಮಂತ್ರಿತ ಕಲಾವಿದೆ ವಸುಧಾ ಶರ್ಮಾ ಸಾಗರ ಆರಂಭದಲ್ಲಿ ರಾಗ್ ಶ್ಯಾಮ್ ಕಲ್ಯಾಣ ಪ್ರಸ್ತುತಗೊಳಿಸಿ, ನಂತರ ರಾಗ್ ಜೋಗ್‌ನಲ್ಲಿ ಹಾಡಿ, ಮರಾಠಿ ಗೀತೆ ಮತ್ತು ದಾಸರಪದಗಳ ಮೂಲಕ ಗಮನಸೆಳೆದರು. ಜನಾಪೇಕ್ಷೆ ಮೂಲಕ ನಾಟ್ಯ ಗೀತೆ ಹಾಡಿ ರಾಗ್ ಭೈರವಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳಿಸಿದರು. ಹಾಮೊನಿಯಂನಲ್ಲಿ ವಿದ್ವಾನ್ ಪ್ರಕಾಶ ಹೆಗಡೆ ಯಡಳ್ಳಿ, ತಬಲಾದಲ್ಲಿ ವಿನಾಯಕ ಸಾಗರ, ಮೃದಂಗದಲ್ಲಿ ನರಸಿಂಹಮೂರ್ತಿ ಸಾಗರ, ಹಿನ್ನೆಲೆಯಲ್ಲಿ ಸಹಗಾನ ಮತ್ತು ತಾನ್ಪೂರದಲ್ಲಿ ಶ್ರೀರಂಜಿನಿ ಮತ್ತು ಶ್ರೀಧರ ಶಾನಭಾಗ ಸಮರ್ಥವಾಗಿ ಸಾಥ್ ನೀಡಿದರು. ರಾಗಮಿತ್ರ ಪ್ರತಿಷ್ಠಾನದ ಮುಖ್ಯಸ್ಥ ವಿದ್ವಾನ್ ಪ್ರಕಾಶ ಹೆಗಡೆ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು.

Share This
300x250 AD
300x250 AD
300x250 AD
Back to top