Slide
Slide
Slide
previous arrow
next arrow

ಆಯ್ಕೆ ಸಮಿತಿಯಲ್ಲಿ ಗೊಂದಲವಿದೆಯೇ ಹೊರತು ಆಯ್ಕೆಯಲ್ಲಿ ಗೊಂದಲವಿಲ್ಲ: ಡಿ.ಜಿ.ಹೆಗಡೆ

300x250 AD

ಯಲ್ಲಾಪುರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಯೋಗ್ಯರ ಆಯ್ಕೆಯಾಗಿದ್ದು, ಅದಕ್ಕೆ ಬೀರಣ್ಣ ನಾಯಕ ಮೊಗಟಾ ಹಾಗೂ ಬೊಮ್ಮಯ್ಯ ಗಾಂವಕರರೇ ಸಾಕ್ಷಿ ಎಂದು ನಿವೃತ್ತ ತಹಶೀಲ್ದಾರ ಡಿ.ಜಿ.ಹೆಗಡೆ ನುಡಿದರು. ಅವರು ನಾಗರಿಕ ವೇದಿಕೆಯ ಆಶ್ರಯದಲ್ಲಿ ಮೊಗಟಾ, ಗಾಂವಕರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಮಾರ್ಗದರ್ಶಕ ಸಮಿತಿಯ ಸದಸ್ಯರಾಗಿ ನೇಮಕಗೊಂಡ ವೇಣುಗೋಪಾಲ ಮದ್ಗುಣಿಯವರನ್ನು ಸನ್ಮಾನಿಸಿ ಮಾತನಾಡಿದರು.

ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಪ್ರಕಾಶ ನಾಯಕ, ಮಲೆನಾಡು ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ, ವಿಶ್ವಹಿಂದು ಪರಿಷತ್ ತಾಲೂಕಾ ಅಧ್ಯಕ್ಷ ನಾರಾಯಣ ನಾಯಕ, ಪ್ರಮುಖರಾದ ಜಿ.ಎನ್.ಗಾಂವಕರ, ನಾಗೇಶ ಯಲ್ಲಾಪುರಕರ, ಬಾಬಾ ಸಾಬ ಅಲನ್, ಶ್ರೀನಿವಾಸ ಗಾಂವಕರ, ದತ್ತಾ ರೇವಣಕರ ಮುಂತಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top