Slide
Slide
Slide
previous arrow
next arrow

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

300x250 AD

ಯಲ್ಲಾಪುರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬೀರಣ್ಣ ನಾಯಕ ಮೊಗಟಾ, ಬೊಮ್ಮಯ್ಯ ಗಾಂವ್ಕರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಮಾರ್ಗದರ್ಶಕ ಸಮಿತಿ ಸದಸ್ಯರಾಗಿ ನೇಮಕಗೊಂಡ ವೇಣುಗೋಪಾಲ ಮದ್ಗುಣಿ ಅವರನ್ನು ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ನಾಗರಿಕ ವೇದಿಕೆಯಿಂದ ಗೌರವಿಸಿ ಅಭಿನಂದಿಸಲಾಯಿತು.

ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಅಧ್ಯಕ್ಷತೆ ವಹಿಸಿ, ಊರಿನ ಪರವಾಗಿ ಸಾಧಕರನ್ನು ಗೌರವಿಸುವುದು ಸಾಮಾಜಿಕ ಜವಬ್ದಾರಿಯಾಗಿದೆ. ಅದನ್ನು ನಿಭಾಯಿಸಿದ ಸಮಾಧಾನ ಇದೆ ಎಂದರು.
ನಿವೃತ್ತ ತಹಸೀಲ್ದಾರ ಡಿ ಜಿ ಹೆಗಡೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿಯ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ನಾರಾಯಣ ನಾಯಕ, ಪ್ರಮುಖರಾದ ಜಿ.ಎನ್.ಗಾಂವ್ಕರ, ನಾಗೇಶ ಯಲ್ಲಾಪುರಕರ್, ಬಾಬಾಸಾಬ ಅಲನ್, ಶ್ರೀನಿವಾಸ ಗಾಂವ್ಕರ ಇತರರಿದ್ದರು.

300x250 AD
Share This
300x250 AD
300x250 AD
300x250 AD
Back to top