Slide
Slide
Slide
previous arrow
next arrow

ಸಮಾನ ಹಕ್ಕು,ಅವಕಾಶ ಕಲ್ಪಿಸಿದ್ದು ಪ್ರವಾದಿ ಮಹಮ್ಮದ್: ಕುಂಞ

300x250 AD

ಭಟ್ಕಳ: ಈ ಜಗತ್ತಿನಲ್ಲಿ ಸಮಾನತೆಯ ಸಮಾಜವನ್ನು ಕಟ್ಟಿ ಬೆಳೆಸಿದ ಕೀರ್ತಿ ಪ್ರವಾದಿ ಮುಹಮ್ಮದ್ (ಸ) ರಿಗೆ ಸಲ್ಲುತ್ತದೆ. ಎಲ್ಲರಿಗೂ ಸಮಾನ ಹಕ್ಕುಗಳು, ಸಮಾನ ಅವಕಾಶಗಳನ್ನು ಪ್ರವಾದಿ ಮಹಮ್ಮದ್ ದೊರಕಿಸಿಕೊಟ್ಟಿದ್ದಾರೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಹೇಳಿದರು.

ಅವರು ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆ ಆಮಿನಾ ಪ್ಯಾಲೇಸ್ ನಲ್ಲಿ ಆಯೋಜಿಸಿದ್ದ ಸಮಾನಾತೆ ಸಮಾಜದ ಶಿಲ್ಪಿ ಪ್ರವಾದಿ ಮಹಮ್ಮದ್ ಹಾಗೂ ಯೋಗೇಶ್ ಮಾಸ್ಟರ್ ವಿರಚಿತ ನನ್ನ ಅರಿವಿನ ಪ್ರವಾದಿ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೃಷ್ಟಿಗಳ ಬಗ್ಗೆ ಪ್ರೀತಿಸದ ವ್ಯಕ್ತಿ ದೇವರನ್ನು ಪ್ರೀತಿಸುತ್ತೇನೆ ಎಂದು ಹೇಳುತ್ತಾನೆ ಎಂದಾದರೆ ಆ ವ್ಯಕ್ತಿ ಜಗತ್ತಿನ ಅತಿ ದೊಡ್ಡ ಸುಳ್ಳು ಹೇಳುತ್ತಿದ್ದಾನೆ. ಒಂದು ವೇಳೆ ನೀವು ದೇವನನ್ನು ಪ್ರೀತಿಸುತ್ತೀರಿ ಎಂದಾದರೆ ನೀವು ಜಗತ್ತಿನ ಇಡೀ ಮನುಷ್ಯರನ್ನು ಪ್ರೀತಿಸುತ್ತೀರಿ. ಎಲ್ಲ ಮನುಷ್ಯರನ್ನು ಗೌರವಿಸಲು ಮತ್ತು ಪ್ರೀತಿಸಲು ಪ್ರವಾದಿ ಮುಹಮ್ಮದ್ ಕಲಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.
‘ನನ್ನ ಅರಿವಿನ ಪ್ರವಾದಿ’ ಕೃತಿಯ ಲೇಖಕ ಯೋಗೇಶ್ ಮಾಸ್ಟರ್ ಮಾತನಾಡಿ, ಅರಬ್ ಮತ್ತು ಅರಬೇತರಲ್ಲಿ ಯಾವುದೇ ವ್ಯತ್ಯಾಸ ಕಾಣದೇ ಎಲ್ಲ ಮನುಷ್ಯರನ್ನು ಗೌರವಯುತವಾಗಿ ಕಂಡಿರುವ ಪ್ರವಾದಿ ಮುಹಮ್ಮದ್ ಈ ಜಗತ್ತಿನ ಅತಿಶ್ರೇಷ್ಟ ವ್ಯಕ್ತಿಯಾಗಿದ್ದಾರೆ. ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ಪ್ರವಾದಿ ಮುಹಮ್ಮದ್ ಕಲಿಸಿಕೊಟ್ಟರು, ಅಂತರಂಗ ಮತ್ತು ಬಹಿರಂಗ ಶುದ್ದಿಯ ಮೂಲಕ ಸಮಾಜವನ್ನು ಹೇಗೆ ಕಟ್ಟಿಬೆಳೆಸಬೇಕು ಎಂದು ಪ್ರವಾದಿ ಮುಹಮ್ಮದ್ ಪೈಗಂಬರರು ಜಗತ್ತಿಗೆ ಮಾರ್ಗದರ್ಶನ ಮಾಡಿಕೊಟ್ಟಿದ್ದಾರೆ ಎಂದರು.
ನನ್ನ ಅರಿವಿನ ಪ್ರವಾದಿ ಕೃತಿಯನ್ನು ಪರಿಚಯಿಸಿ ಮಾತನಾಡಿದ ಅಂಜುಮನ್ ಪದವಿ ಮಹಾವಿದ್ಯಾಲಯದ ಪ್ರೋ. ಆರ್.ನಾಯಕ, ಜಗತ್ತಿನ ಅತ್ಯಂತ ಶ್ರೇಷ್ಟ ಪ್ರವಾದಿಯ ಕುರಿತು ಇಂದು ಮುಸ್ಲಿಮರೂ ಕೂಡ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಅವರನ್ನು ಪ್ರತಿಯೊಬ್ಬರು ತಮ್ಮ ಅರಿವಿನ ಆಳಕ್ಕೆ ಇಳಿಸಿಕೊಳ್ಳಬೇಕು. ಯಾವುದೇ ಪೂರ್ವಗ್ರಹವಿಲ್ಲದೆ ನನ್ನ ಅರಿವಿನ ಪ್ರವಾದಿ ಕೃತಿಯನ್ನು ಅಧ್ಯಯನ ಮಾಡಿದ್ದೇ ಆದಲ್ಲಿ ಅವರನ್ನು ನಾವು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ. ಜಗತ್ತಿನ ಮಹಾನ ವ್ಯಕ್ತಿಗಳ ಕುರಿತು ಎಲ್ಲರೂ ಅರಿತುಕೊಳ್ಳಬೇಕಾಗಿದೆ ಎಂದು ಅವರು ಕರೆ ನೀಡಿದರು.
ಭಟ್ಕಳ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಧರ್ಮವನ್ನು ಮೌಲ್ಯಗಳ ಆಧಾರದಲ್ಲಿ ಪರಿಗಣಿಸಬೇಕೆ ಹೊರತು ಬಣ್ಣಗಳ ಆಧಾರದಲ್ಲಿ ಅಲ್ಲ. ಇಂದು ಧರ್ಮವನ್ನು ಬಣ್ಣಗಳ ಆಧಾರದಲ್ಲಿ ವಿಂಗಡಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ತಂಝೀಮ್ ಅಧ್ಯಕ್ಷ ಇನಾತುಲ್ಲಾ ಶಾಬಂದ್ರಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ್ ನಾಯ್ಕ, ಜಮಾಅತೆ ಇಸ್ಲಾಮಿ ಹಿಂದ್ ಉ.ಕ ಜಿಲ್ಲಾ ಸಂಚಾಲಕ ಅಬ್ದುಲ್ ಮನ್ನಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಸಂಚಾಲಕ ಸಯೀದ್ ಇಸ್ಮಾಯಿಲ್ ಆಶಯ ನುಡಿಗಳನ್ನಾಡಿದರು. ಎಂ.ಆರ್.ಮಾನ್ವಿ ಸ್ವಾಗತಿಸಿ ಕಾರ್ಯಕ್ರಮ ನಿರುಪಿಸಿದರು. ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ. ಧನ್ಯವಾದ ಅರ್ಪಿಸಿದರು.

300x250 AD

ಬಿ.ಎ ಪದವಿಯಲ್ಲಿ ಮೂರು ಚಿನ್ನದ ಪದಕ ಪಡೆದ ಅಂಜುಮನ್ ಪದವಿ ಮಹಾವಿದ್ಯಾಲಯದ ಶ್ರೇಯಸ್ ನಾಯಕ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.೯೯ಕ್ಕೂ ಹೆಚ್ಚು ಅಂಕಗಳನ್ನು ಪಡೆದ ಅಸ್ಬಾ ಇಕ್ಕೇರಿಯನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಅಲ್ಲದೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಆಶಾ ಸಿರಿಲ್ ಡಿಸೋಜಾ, ದ್ವಿತೀಯ ಬಹುಮಾನ ಪಡೆದ ಕೀರ್ತಿ ನಾಯ್ಕ, ತೃತಿಯ ಬಹುಮಾನ ಪಡೆದ ಕುಮಟಾ ಶೀತಲ್ ಅಶೋಕ್ ಬಂಡಾರಿಯವರನ್ನು ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಲಾಯಿತು.

Share This
300x250 AD
300x250 AD
300x250 AD
Back to top