Slide
Slide
Slide
previous arrow
next arrow

ರಾಮಭಕ್ತರಲ್ಲಿ ಮಹತ್ವದ ಮನವಿ ಮಾಡಿದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌

300x250 AD

ನವದೆಹಲಿ: ಮುಂಬರುವ ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಸುದಂದರ್ಭದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ದೇಶದಾದ್ಯಂತದ ಶ್ರೀರಾಮನ ಭಕ್ತರಲ್ಲಿ ಮಹತ್ವದ ಮನವಿಯನ್ನು ಮಾಡಿಕೊಂಡಿದೆ.

ಜನವರಿ 22ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ನಡುವೆ ಪ್ರತಿ ಗ್ರಾಮ, ಮೊಹಲ್ಲಾ, ಕಾಲೋನಿಯ ಸಮೀಪದ ದೇಗುಲಗಳಲ್ಲಿ ರಾಮಭಕ್ತರು ಒಂದಾಗಿ ಭಜನೆ, ಕೀರ್ತನೆಗಳನ್ನು ನೆರವೇರಿಸಿ. ಟೆಲಿವಿಷನ್‌ ಅಥವಾ ಸ್ಕ್ರೀನ್‌ ಬಳಸಿ ಸಮಾಜದ ಬಾಂಧವರಿಗೆ ಅಯೋಧ್ಯೆಯ ಪ್ರಾಣ ಪ್ರತಿಷ್ಠೆಯ ನೇರ ದೃಶ್ಯಗಳನ್ನು ತೋರಿಸಿ. ಶಂಖನಾದ, ಘಂಟೆನಾದ ಮತ್ತು ಆರತಿಗಳನ್ನು ಬೆಳಗಿಸಿ ಎಂದು ಟ್ರಸ್ಟ್‌ ಜನರಲ್ಲಿ ಮನವಿ ಮಾಡಿದೆ.

ಅಲ್ಲದೇ ಈ ಸಂದರ್ಭದಲ್ಲಿ  108 ಬಾರಿ ʼಶ್ರೀರಾಮ ಜಯ ರಾಮ ಜಯ ಜಯ ರಾಮʼ ವಿಜಯ ಮಂತ್ರವನ್ನು ಮೊಳಗಿಸುವಂತೆಯೂ ಟ್ರಸ್ಟ್‌ ಮನವಿ ಮಾಡಿದೆ. ಹನುಮಾನ್‌ ಚಾಲೀಸಾ, ಸುಂದರಕಾಂಡ, ರಾಮರಕ್ಷಾ ಸ್ತೋತ್ರಗಳನ್ನು ಪಠಿಸುವಂತೆ ತಿಳಿಸಿದೆ. ಅಂದು ಸಂಜೆ ಸೂರ್ಯಾಸ್ತದ ಬಳಿಕ ಮನೆಗಳಲ್ಲಿ ದೀಪಗಳನ್ನು ಬೆಳಗಿಸುವಂತೆಯೂ ಮನವಿಯನ್ನು ಮಾಡಿದೆ.

300x250 AD

https://x.com/ShriRamTeerth/status/1720409735713952221?s=20

Share This
300x250 AD
300x250 AD
300x250 AD
Back to top