ಹಳಿಯಾಳ: ಕೃಷಿ ಜಮೀನುಗಳಿಗೆ ಕಾಡುಪ್ರಾಣಿಗಳು ದಾಳಿ ಮಾಡುತ್ತಿದ್ದು, ಬೆಳೆಗಳಿಗೆ ರಕ್ಷಣೆ ನೀಡಿ ಪರಿಹಾರ ಒದಗಿಸಿಕೊಡುವಂತೆ ಅರಣ್ಯ ಇಲಾಖೆಗೆ ದಲಿತ ಸಂಘರ್ಷ ಸಮಿತಿಯ ಕೆಂಪು ಸೇನೆ ಆಗ್ರಹಿಸಿದೆ.
ಈ ಕುರಿತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಸಂಘಟನೆಯ ಕಾರ್ಯಕರ್ತರು, ತಾಲೂಕಿನ ಡೋಮಗೇರಾ ಹಾಗೂ ಅಜಗಾಂವ್ ಗ್ರಾಮದ ಕಬ್ಬು ಬೆಳೆಗಾರರು ಕಬ್ಬು ಬೆಳೆ ಬೆಳೆದಿರುವ ಕೃಷಿ ಜಮೀನಿಗಳು ಅರಣ್ಯಕ್ಕೆ ಹತ್ತಿರವಾಗಿರುವುದರಿಂದ ಕಾಡುಪ್ರಾಣಿಗಳಾದ ಆನೆ, ಹಂದಿ, ಜಿಂಕೆ ಮುಂತಾದ ಕಾಡುಪ್ರಾಣಿಗಳು ಮಧ್ಯರಾತ್ರಿ ನುಗ್ಗಿ ಕಬ್ಬು ಬೆಳೆಗಳನ್ನ ತಿಂದು, ತುಳಿದು ನಾಶ ಮಾಡುತ್ತಿವೆ. ಇದರಿಂದಾಗಿ ಈ ಭಾಗದ ಕಬ್ಬು ಬೆಳೆಗಾರರು ನಷ್ಟದಲ್ಲಿದ್ದು, ಈ ವಷÀð ಬರಗಾಲ ಬಿದ್ದಿರುವುದರಿಂದ ರೈತರು ಚಿಂತಾಜನಕ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಹೀಗಾಗಿ ಈ ಭಾಗದ ಗ್ರಾಮಗಳ ಕಬ್ಬು ಬೆಳೆಗೆ ರಕ್ಷಣೆ ನೀಡಿ ಆದ ನಷ್ಟಕ್ಕೆ ಪರಿಹಾರ ಒದಗಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ್ ಅಂಬೊಳ್ಳಿ, ಕಾರ್ಯದರ್ಶಿ ರಾಜು ಕುರುಬರ ಸೇರಿ ಇತರರು ಇದ್ದರು.