ಹಳಿಯಾಳ: ನ್ಯಾಯಬೆಲೆ ಅಂಗಡಿ ಮಾಲೀಕರ ಬೇಡಿಕೆಗಳನ್ನ ಈಡೇರಿಸುವವರೆಗೆ ಆಹಾರ ಧಾನ್ಯಗಳನ್ನ ಪೂರೈಸದಿರಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸರಕಾರಿ ಪಡಿತರ ವಿತರಕರ ಸಂಘಟನೆ ಘೋಷಿಸಿದೆ.
ಈ ಕುರಿತು ತಹಶೀಲ್ದಾರರಿಗೆ ಮನವಿ ಸಲ್ಲಿಸಿರುವ ವಿತರಕರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.7ರಂದು ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗಿದೆ. ಅಂದು ಸಂಘದ ರಾಜ್ಯಾಧ್ಯಕ್ಷರು ನಿರ್ದೇಶನ ನೀಡುವವರೆಗೂ ನಾವು ಗ್ರಾಹಕರಿಗೆ ಆಹಾರ ಧಾನ್ಯ ಪೂರೈಸುವುದಿಲ್ಲ ಎಂದು ತಿಳಿಸಿದ್ದಾರೆ.
ಈ ವೇಳೆ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ತಾಲೂಕು ಅಧ್ಯಕ್ಷ ಶಂಭಾಜಿ ಹಳಿಯಾಳಕರ, ಉಪಾಧ್ಯಕ್ಷ ಪರಶುರಾಮ ಗೌಡ, ತಾಲೂಕು ಕಾರ್ಯದರ್ಶಿ ನವೀನ್ ಪಾಟೀಲ್, ತಾಲೂಕು ಖಜಾಂಚಿ ಬಸವರಾಜ ಪಾಟೀಲ್ ಮುಂತಾದವರಿದ್ದರು.