ಅಯೋಧ್ಯೆ: ಐವತ್ತೊಂದು ಘಾಟ್‌ಗಳು, 21 ಲಕ್ಷ ಮಣ್ಣಿನ ಹಣತೆಗಳು, 25,000 ಸ್ವಯಂಸೇವಕರು, ಅಯೋಧ್ಯೆಯ ಇತಿಹಾಸವನ್ನು ಪ್ರದರ್ಶಿಸುವ ಬೃಹತ್ ಡಿಜಿಟಲ್ ಪರದೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಗರದ ಸೌಂದರ್ಯೀಕರಣ ಸೇರಿದಂತೆ 12 ಸರ್ಕಾರಿ ಇಲಾಖೆಗಳು ಮತ್ತು ಜಿಲ್ಲಾಡಳಿತವು ದೀಪೋತ್ಸವವನ್ನು ಐತಿಹಾಸಿಕವಾಗಿಸುವಲ್ಲಿ ನಿರತವಾಗಿದೆ.
ಅಯೋಧ್ಯೆಯಲ್ಲಿ ಈ ಬಾರಿ ದೀಪಾವಳಿಯಂದು ನಡೆಯಲಿರುವ ದೀಪೋತ್ಸವ ವಿಶ್ವ ದಾಖಲೆಯನ್ನು ನಿರ್ಮಾಣ ಮಾಡುವುದು ಬಹುತೇಕ ಖಚಿತವಾಗಿದೆ. ಅಧಿಕಾರಿಗಳ ಪ್ರಕಾರ, 21 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವದಾಖಲೆ ನಿರ್ಮಿಸುವ ಗುರಿ ಹೊಂದಲಾಗಿದೆ, ಆದರೆ ಸರಯು ಉದ್ದಕ್ಕೂ 51 ಘಾಟ್‌ಗಳಲ್ಲಿ 24 ಲಕ್ಷ ದೀಪಗಳನ್ನು ಹಾಕಲು ವ್ಯವಸ್ಥೆ ಮಾಡಲಾಗುತ್ತಿದೆ. ನವೆಂಬರ್ 12 ರಿಂದ ಪ್ರಾರಂಭವಾಗುವ ಮೂರು ದಿನಗಳ ದೀಪೋತ್ಸವದಲ್ಲಿ ಸುಮಾರು 25,000 ಸ್ವಯಂಸೇವಕರು ಈ ದೀಪಗಳನ್ನು ಬೆಳಗಿಸುತ್ತಾರೆ.
ದೀಪಾವಳಿಯ ಒಂದು ದಿನ ಮುಂಚಿತವಾಗಿ ಸರ್ಕಾರವು ‘ದೀಪೋತ್ಸವ’ವನ್ನು ಆಯೋಜಿಸುತ್ತಿದೆ. ಇದರಡಿ ಕಾಲೇಜುಗಳ ವಿದ್ಯಾರ್ಥಿಗಳು, ಸ್ವಯಂಸೇವಕರು ಅಯೋಧ್ಯೆಯ ನದಿಯ ದಡದ ಉದ್ದಕ್ಕೂ ದೀಪಗಳನ್ನು ಸಾಲಾಗಿ ಇಡಲಿದ್ದಾರೆ. ಮುಸ್ಸಂಜೆಯಲ್ಲಿ ದೀಪಗಳು ಬೆಳಗಳಿವೆ. ಯೋಗಿ ಆದಿತ್ಯನಾಥ್ ಸರ್ಕಾರ ಬಂದ ಬಳಿಕ ಅಯೋಧ್ಯೆಯಲ್ಲಿ ದೀಪೋತ್ಸವದ ಸಂಪ್ರದಾಯ ಪ್ರಾರಂಭವಾಯಿತು. 2017 ರಲ್ಲಿ 51,000 ದೀಪಗಳೊಂದಿಗೆ ಪ್ರಾರಂಭವಾಗಿ, ಈ ಸಂಖ್ಯೆ 2019 ರಲ್ಲಿ 4.10 ಲಕ್ಷಕ್ಕೆ ಏರಿತು, 2020 ರಲ್ಲಿ 6 ಲಕ್ಷಕ್ಕೂ ಹೆಚ್ಚು ದೀಪ ಬೆಳಗಿಸಲಾಯಿತು ಮತ್ತು ಕಳೆದ ವರ್ಷ 14 ಲಕ್ಷಕ್ಕೂ ಹೆಚ್ಚು ದೀಪ ಬೆಳಗಿಸಿ ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಲಾಯಿತು.