Slide
Slide
Slide
previous arrow
next arrow

ಬಂಗಾರದ ಪದಕ ಪಡೆದ ಅವಳಿ ವಿದ್ಯಾರ್ಥಿಗಳಿಗೆ ಸನ್ಮಾನ

300x250 AD

ಗೋಕರ್ಣ: ಬಂಗಾರದ ಪದಕದೊಂದಿಗೆ ವಿಶ್ವವಿದ್ಯಾಲಯಕ್ಕೆ 2ನೇ ರ‍್ಯಾಂಕ್ ಪಡೆದು ಇಂಜಿನೀಯರಿ0ಗ್ ಪದವಿ ಮುಗಿಸಿದ ಇಲ್ಲಿಯ ಪ್ರಸಾದ ಕುಟುಂಬದ ಅವಳಿಗಳಾದ ಚೈತ್ರಾ ಪ್ರಸಾದ, ಚಂದನಾ ಪ್ರಸಾದ ಇವರಿಗೆ ಶ್ರೀ ಕ್ಷೇತ್ರ ಬ್ರಾಹ್ಮಣ ಪರಿಷತ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚಂದ್ರಶೇಖರ ಅಡಿಮೂಳೆ ಮಾತನಾಡಿ, ಅವಳಿ ವಿದ್ಯಾರ್ಥಿಗಳಾದ ಇವರು ಇಂಜಿನೀಯರಿ0ಗ್ ಪದವಿಯಲ್ಲಿ ಬಂಗಾರದ ಪದಕ ಪಡೆದಿರುವುದು ನಿಜಕ್ಕೂ ಸಮಾಜಕ್ಕೆ ಮತ್ತು ಈ ಕ್ಷೇತ್ರಕ್ಕೆ ಸಲ್ಲುವ ಗೌರವವಾಗಿದೆ ಎಂದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಪಂಡಿತ ಪ್ರಾಸ್ತಾವಿಕವಾಗಿ ಮಾತನಾಡಿದರು.

300x250 AD

ಬ್ರಾಹ್ಮಣ ಪರಿಷತ್‌ನ ರಾಮಕೃಷ್ಣ ಶಂಕರಲಿ0ಗ, ಉದಯ ಮಯ್ಯರ, ಗಣಪತಿ ಉಪಾಧ್ಯ, ರೋಟರಿ ಕ್ಲಬ್‌ನ ಚಿಂತಾಮಣಿ ಪ್ರಸಾದ, ಮೋಹನ ಪ್ರಸಾದ, ಲಕ್ಷ್ಮಿ ಪ್ರಸಾದ, ಸವಿತಾ ಪ್ರಸಾದ, ಸುವರ್ಣಾ ಪ್ರಸಾದ ಇತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top