ಉತ್ತರಕನ್ನಡ ಜಿಲ್ಲೆ ಜನರ ಸ್ವಾಭಿಮಾನಕ್ಕಾಗಿ ಪಾದಯಾತ್ರೆ
ಮೆಡಿಕಲ್ ಕಾಲೇಜ್, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹ
ತಾಯಿ ಶ್ರೀ ಮಾರಿಕಾಂಬೆಯು ಎಲ್ಲರಿಗೂ ಶುಭವನ್ನುಂಟು ಮಾಡಲಿ. ನಮ್ಮ ಹೋರಾಟ ಯಶಸ್ವಿಯಾಗುವಂತೆ ಕರುಣಿಸಲಿ💐💐
ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಬ್ಬೇ ಒಬ್ಬ ನರ / ಮೆದುಳು ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯರಿಲ್ಲ. ನಮ್ಮ ಜೀವಕ್ಕೆ ಬೆಲೆ ಇಲ್ಲವೇ?
ಮಂಗಳೂರು ಭಾಗದಲ್ಲಿ 8 ಮೆಡಿಕಲ್ ಕಾಲೇಜು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದೆ. ನಮ್ಮ ಭಾಗದಲ್ಲಿ ಒಂದೂ ಇಲ್ಲ. ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ನಾವು ಎಲ್ಲಾ ಸಮಸ್ಯೆಗೂ ಬೇರೆ ಜಿಲ್ಲೆಗೆ ಹೋಗಬೇಕಾಗಿದೆ. ನಮಗೆ ನಾಚಿಕೆಯಾಗಬೇಕಲ್ಲವೇ? ನಮಗೂ ನೆಮ್ಮದಿಯಿಂದ ಬದುಕುವ ಹಕ್ಕಿಲ್ಲವೇ?
ದಿನಕ್ಕೆ ಸುಮಾರು 300 ಜನ ದೂರದ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಇದೆ. ನಮಗೆ ಶಾಪದ ಮುಕ್ತಿ ಯಾವಾಗ?
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ಕೊಡಿಸಲು ಮೂರು ಗಂಟೆ ಪ್ರಯಾಣ ಮಾಡಬೇಕಾಗಿದೆ. ಎಷ್ಟೋ ಬಾರಿ ಮಾರ್ಗ ಮಧ್ಯೆ ಸಾವು ಸಂಭವಿಸುತ್ತಿದೆ. ಇದಕ್ಕೆ ಯಾರು ಹೊಣೆ?
ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಬೇಕಿದೆ….
ಇದು ನಮ್ಮ ಸ್ವಾಭಿಮಾನದ ಹೋರಾಟ
ನಾನು ನವೆಂಬರ್ 2ರಿಂದ ಪಾದಯಾತ್ರೆ ಹೋರಾಟವನ್ನು ಹಮ್ಮಿಕೊಡಿದ್ದೇನೆ. ಶಿರಸಿಯಿಂದ ಕಾರವಾರದವರೆಗೆ ನಾವೆಲ್ಲ ಸೇರಿ ಪಾದಯಾತ್ರೆ ಮಾಡಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸೋಣ.
ನನ್ನ ನಂಬಿ ನೀವೆಲ್ಲರೂ ಭಾಗವಹಿಸಿ, ಯಶಸ್ವಿಗೊಳಿಸಿ
ನಿಮ್ಮವ:
ಅನಂತಮೂರ್ತಿ ಹೆಗಡೆ
ಮೊ.Tel:+919448317709