ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳಲ್ಲಿ ಭಾರತವು ಭಾರೀ ಪ್ರಮಾಣದ ಮಾವಿನಹಣ್ಣನ್ನು ರಫ್ತು ಮಾಡುವ ಮೂಲಕ 47 ಮಿಲಿಯನ್ ಯುಎಸ್ ಡಾಲರ್‌ಗಳನ್ನು ಗಳಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ಮಾವಿನಹಣ್ಣನ್ನು ರಫ್ತು ಮಾಡುವ ಮೂಲಕ ಗಮನಾರ್ಹ ಬೆಳವಣಿಗೆಯನ್ನು ಭಾರತ ದಾಖಲಿಸಿದೆ ಎಂದು ವರದಿಗಳು ತಿಳಿಸಿವೆ.
ಈ ಅವಧಿಯಲ್ಲಿ ಭಾರತವು ಸುಮಾರು 27 ಸಾವಿರ ಮೆಟ್ರಿಕ್ ಟನ್ ಮಾವಿನ ಹಣ್ಣನ್ನು ರಫ್ತು ಮಾಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಭಾರತವು ಯುಎಸ್‌ಎಗೆ ಭಾರತೀಯ ಮಾವಿನಹಣ್ಣಿನ ರಫ್ತಿನಲ್ಲಿ 19 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸುವ ಮೂಲಕ ದೊಡ್ಡ ಯಶಸ್ಸನ್ನು ಸಾಧಿಸಿದೆ ಎಂದು ಸಚಿವಾಲಯ ಹೇಳಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳಲ್ಲಿ ಭಾರತವು ಯುಎಸ್‌ಎಗೆ ಎರಡು ಸಾವಿರ ಮೆಟ್ರಿಕ್ ಟನ್‌ಗೂ ಹೆಚ್ಚು ಮಾವಿನ ಹಣ್ಣನ್ನು ರಫ್ತು ಮಾಡಿದೆ.