Slide
Slide
Slide
previous arrow
next arrow

ವಾಲ್ಮೀಕಿ ಚರಿತ್ರೆಯ ಕುರಿತು ಪಠ್ಯದಲ್ಲಿ ಅಳವಡಿಸಬೇಕಿದೆ: ಸಚಿವ ವೈದ್ಯ

300x250 AD

ಭಟ್ಕಳ: ತಾಲೂಕು ಆಡಳಿತ, ತಾಲ್ಲೂಕು ಪಂಚಾಯತ, ಪುರಸಭೆ ಭಟ್ಕಳ, ಪಟ್ಟಣ ಪಂಚಾಯತ ಜಾಲಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವು ಇಲ್ಲಿನ ಅರ್ಬನ್ ಬ್ಯಾಂಕ್ ಸಭಾಗ್ರಹದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಛಾಟಿಸಿ ಮಾತನಾಡಿದ ಸಚಿವ ಮಂಕಾಳ ವೈದ್ಯ ಮಹರ್ಷಿ ವಾಲ್ಮೀಕಿ ಅವರು ವಿಶೇಷ ವ್ಯಕ್ತಿತ್ವವುಳ್ಳ ವ್ಯಕ್ತಿ. ನಮ್ಮ‌ ಕಲಿಕೆಯ ಸಮಯದಲ್ಲಿ ಇವರ ಮಾರ್ಗದರ್ಶನದ ವಿಚಾರಗಳಿಂದ ವ್ಯಕ್ತಿತ್ವವನ್ನು ಉತ್ತಮವಾಗಿ ಬದಲಾಯಿಸಿಕೊಳ್ಳುವಂತೆ ಮಾಡಿತ್ತು. ಆದರೆ ಇಂದಿನ ಪಠ್ಯಕ್ರಮದಲ್ಲಿ, ಪಠ್ಯ ಪುಸ್ತಕದಲ್ಲಿ ವಾಲ್ಮೀಕಿ ಅವರ ಕುರಿತಾದ ಒಂದು ವಿಚಾರ ಇಲ್ಲ ಎಂಬುದು ನನ್ನ ಅಭಿಪ್ರಾಯ. ಇಂತಹ ವ್ಯಕ್ತಿತ್ವವುಳ್ಳವರ ಚರಿತ್ರೆಯ ಬಗ್ಗೆ ತಿಳಿಯಬೇಕಾದ ಅವಶ್ಯಕತೆ ಇಂದಿನ ಪೀಳಿಗೆಯವರದ್ದಾಗಿದೆ. ಎಷ್ಟೇ ಕಠೋರವಾದ ವ್ಯಕ್ತಿ ಬದಲಾಗಿ ತಿಳಿದುಕೊಳ್ಳುವ ವಿಚಾರಧಾರೆ ಮಹರ್ಷಿ ವಾಲ್ಮೀಕಿಯವರಲ್ಲಿತ್ತು. ಅಂತಹ ವ್ಯಕ್ತಿಯ ವಿಷಯವು ಇಂದು ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಷ್ಟದ ಸಮಯದಲ್ಲಿ ಯಾರಿಗೂ ಬೇಡವಾದ ವ್ಯಕ್ತಿಯಾಗಿದ್ದರು. ಮನುಷ್ಯರನ್ನು ಬೇಟೆ ಮಾಡುವ ವ್ಯಕ್ತಿಯಾಗಿದ್ದ ವಾಲ್ಮೀಕಿ ಅವರು
ಕುಟುಂಬ ನಿರ್ವಹಣೆಗಾಗಿ ಈ ಕೆಲಸ ಮಾಡುತ್ತಿದ್ದು ನಿಮ್ಮ ಮನೆ ಅವರಿಗೆ ನಿಮ್ಮ ಗೊತ್ತಿದೆಯಾ ಎಂಬ ಬಗ್ಗೆ ಓರ್ವರು ಕೇಳಿದ ಪ್ರಶ್ನೆಗೆ
ಮನೆಗೆ ತೆರಳಿದ ಮಹರ್ಷಿ ವಾಲ್ಮೀಕಿ ಅವರು ತಮ್ಮ ಕೆಲಸದ ಬಗ್ಗೆ ಮಡದಿ ಮಕ್ಕಳಿಗೆ ತಿಳಿಸಿದರು. ಮಡದಿ ಮಕ್ಕಳ ಮಾತನ್ನು ಕೇಳಿ ಪಶ್ಚಾತ್ತಾಪ ಪಟ್ಟು ಮತ್ತೆ ಕಾಡಿಗೆ ತೆರಳಿ ಇಂತಹ ಕೆಲಸ ಮಾಡಿರುವ ನನಗೆ ವಿಮೋಚನೆ ಬೇಕಿದೆ ತೀರ್ಮಾನಿಸಿ, ನಾಸ್ತಿಕರಾದರು.

ವಾಲ್ಮೀಕಿ ಅವರು ಕಟುಕರಾಗಿದ್ದವರು ಮಹರ್ಷಿಗಳಾದರು.
ಏನು ತಿಳಿಯದವರು ಪಂಡಿತರಾಗಿದರು. ಜಗತ್ತಿಗೆ ದೇವರಾಗಿದ್ದ ಶ್ರೀ ರಾಮ ಚರಿತ್ರೆ ಬರೆದರು. ತಪ್ಪು ಮಾಡದೇ ಕಾಡಿಗೆ ಹೋದ ಶ್ರೀರಾಮ ಮತ್ತು ಸೀತಾ ಮಾತೆಗೆ ಆಶ್ರಯ ನೀಡಿದರು ಎಂದು ಹೇಳಿದರು.

ಮಹರ್ಷಿಗಳ ವಿಚಾರವು ನಮ್ಮೆಲ್ಲರಿಗೂ ಮಾರ್ಗದರ್ಶನವಾಗಲಿದೆ.
ಮನೆ ಮಂದಿಗೆ ನಮ್ಮ ಉದ್ಯೋಗ ಕೆಲಸದ ವಿಷಯವು ಎಷ್ಟರ ಮಟ್ಟಿಗೆ ಗೊತ್ತಿದೆ ಎಂಬುದು ಇಂದಿನ ನಮಗೂ ಅನ್ವಯವಾಗುತ್ತದೆ ಎಂದ ಅವರು ಇಂದಿನ ಪೀಳಿಗೆಯ ಮಹರ್ಷಿಗಳ ಬಗ್ಗೆ ಗೊತ್ತಿಲ್ಲವಾಗಿದೆ. ಶಿಕ್ಷಣದ ಜೊತೆಗೆ ಈ ರೀತಿಯ ವಿಷಯ ನೀಡುತ್ತಿಲ್ಲದಿರುವುದಕ್ಕೆ ಸಮಾಜದ ಸ್ಥಿತಿ ಹೀಗಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ರಾಮಾಯಾಣ ಎಂದರೆ ಜೀವನ ಬದಲಾಯಿಸುವ ಗ್ರಂಥ ಎಂದರು.

ನನ್ನ ಕ್ಷೇತ್ರದ ಅಂಗನವಾಡಿಯಿಂದ ಕಾಲೇಜುಗಳ ತನಕದ ವಿದ್ಯಾರ್ಥಿಗಳನ್ನು ಅಧಿಕಾರಿಗಳು ಭೇಟಿ ನೀಡಿ ವ್ಯವಸ್ಥೆ ಸರಿಪಡಿಸುವುದಲ್ಲ ಬದಲಿಗೆ ಅವರ ಶಿಕ್ಷಣದ ಮಟ್ಟದ ಬಗ್ಗೆ ಅವರಿಂದ ತಿಳಿದುಕೊಳ್ಳಬೇಕು ಆಗ ಮಾತ್ರ ಅವರ ತಪ್ಪು ಸರಿ ನಮಗೆ ಹೇಳಲು ಸುಧಾರಿಸಲು ಸಾಧ್ಯ. ಎಲ್ಲರು ಸಹ ಇಂತಹ ಗ್ರಂಥದ ಬಗ್ಗೆ ತಿಳಿದು ಬದುಕು ಸಾಗಿಸಿದಲ್ಲಿ ಉತ್ತಮ ಸಮಾಜ ನಿರ್ಮಾಣಗೊಳ್ಳಲಿದೆ. ಕೆಟ್ಟದ್ದನ್ನು ನೋಡಿ ಕೆಟ್ಟವರಾಗುತ್ತಾರೆ ಹೊರತು ಯಾರು ಕೆಟ್ಟವರಲ್ಲ. ಗೊತ್ತೋ ಗೊತ್ತಿಲ್ಲದೇ ತಪ್ಪು ಮಾಡಿ ಸರಿಪಡಿಸಿಕೊಂಡರೆ ಅದು ಉತ್ತಮ. ಇಂತಹ ಪಂಡಿತರ ಕಾವ್ಯವನ್ನು ಅಳವಡಿಸಿಕೊಂಡು ಬಂದಲ್ಲಿ ವ್ಯಕ್ತಿ ಸಮಾಜದಲ್ಲಿ ಉತ್ತಮನಾಗುತ್ತಾನೆ. ದೇವರು ಭಕ್ತಿ ಶ್ರದ್ಧೆ ಮಾಡಿಕೊಂಡು ಬಂದ ಹಿನ್ನೆಲೆ ಮಳೆ ಬೆಳೆಗಳು ನಮ್ಮಲ್ಲಿ ಆಗುತ್ತಿವೆ. ನಮ್ಮಲ್ಲಿ ಬರಗಾಲ ಪ್ರಮಾಣ ಇಲ್ಲ ಎಂದು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ ನಮಗೆ ಬೇರೆ ರೀತಿಯ ವ್ಯವಸ್ಥೆ ಕಲ್ಪಿಸಿ ಅನುದಾನ ನೀಡಿ ಎಂದಿದ್ದೇನೆ. ಕಾರಣ ನಮ್ಮಲ್ಲಿ ದೇವರ ಬಲ‌ ಇದೆ ಎಂದ ಅವರು ಕಾಡಿನಲ್ಲಿಯೇ ಇದ್ದು ದೇವರು ದೈವವನ್ನು ನಂಬಿ ಬದುಕು ಸಾಗಿಸುತ್ತಿರುವವರು ಗೊಂಡ ಸಮಾಜದವರಾಗಿದ್ದು, ಸರಕಾರ ಅವರ ಜೊತೆಗೆ ಸದಾ ಇರಲಿದೆ ಮತ್ತು ನಮ್ಮ ಜೊತೆಗೆ ಶ್ರೀ ರಾಮಚಂದ್ರ ಸದಾ ಇರಲಿದ್ದಾನೆ ಎಂದರು.

300x250 AD

ಬೆಳಕೆಯ ಕಾನಮದ್ಲು ನಿವ್ರತ್ತ ಮುಖ್ಯಾಧ್ಯಾಪಕ ಎಸ್‌. ಟಿ. ಗೊಂಡ ಮಹರ್ಷಿ ವಾಲ್ಮೀಕಿ ಅವರ ಕುರಿತಾಗಿ ಉಪನ್ಯಾಸ ನೀಡಿ ಮಾತನಾಡಿದ್ದು ‘ಅಂದಿನ ವ್ಯವಸ್ಥೆಯಲ್ಲಿ ಈಗಿನ ಶಿಕ್ಷಣ ಇಲ್ಲ. ನಮಗೆಲ್ಲ ರಾಮಾಯಣ ಮಹಾಭಾರತದ ಪರಿಚಯವಿರುವುದರ ಜೊತೆಗೆ ನಮ್ಮ ಹಿರಿಯರು ತಿಳಿಸಿದ್ದರು. ಮುಂದಿನ ಪೀಳಿಗೆಗೆ ಅನೂಕೂಲವಾಗುವ ಜೀವನ ಶೈಲಿಯನ್ನು ಬೆಳೆಸಿಕೊಳ್ಳಬೇಕು. ನಮ್ಮ ನೀತಿ ನಡೆ ಹಿರಿಯರಿಗೆ ಗೌರವ ನೀಡುವ ಮನಸ್ಥಿತಿಯು ರಾಮಾಯಣದಿಂದ ಬರಲಿದೆ ಎಂದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಯಕ ಆಯುಕ್ತೆ ಡಾ. ನಯನಾ ಎನ್. ‘ಒಬ್ಬ ಸಾಮಾನ್ಯ ವ್ಯಕ್ತಿ ಬೇಟೆಗಾರನ ಮಗನಾಗಿ ದರೋಡಕೋರನಾಗಿ ಇದ್ದು ತಪ್ಪು ಮಾಡಿ ಮಹರ್ಷಿ ಆಗುತ್ತಾನೆ. ವ್ಯಕ್ತಿ ತಪ್ಪು ಮಾಡಿ ಅದನ್ನು ಸರಿಪಡಿಸಿ ಬದುಕಬೇಕೆಂಬ ಹಾದಿಯಲ್ಲಿ ಹೋದರು. ಮತ್ತು ಅದನ್ನು ಅಂದಿನ ಸಮಾಜ ಒಪ್ಪಿಕೊಂಡಿದೆ. ಇಂದಿನ ಸಮಾಜದಲ್ಲಿಯೂ ಸಹ ತಪ್ಪು ಮಾಡಿದ ವ್ಯಕ್ತಿಗೆ ಅವರು ತಪ್ಪನ್ನು ಸರಿಪಡಿಸಿಕೊಂಡು ಹೋಗಲು ಅವಕಾಶ ನೀಡಬೇಕು ಬದಲಿಗೆ ಅವರ ಮೇಲೆ ಆಪಾದನೆ ಮಾಡಬಾರದು. ಅವರ ತಪ್ಪು ಅವರಿಗೆ ಅರ್ಥೈಸಿಕೊಳ್ಳುವಂತೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಗೊಂಡ ಸಮಾಜದಲ್ಲಿ ವಿಧ್ಯಾಭ್ಯಾಸದಲ್ಲಿ ಹೆಚ್ಚಿನ ಅಂಕ‌ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ವೇದಿಕೆಯಲ್ಲಿ ತಹಸೀಲ್ದಾರ ತಿಪ್ಪೇಸ್ವಾಮಿ, ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಂಜಪ್ಪಾ ಎನ್. ಇದ್ದರು.

ಪ್ರಭಾರ ಸಹಾಯಕ ನಿರ್ದೇಶಕಿ ಸಮಾಜ ಕಲ್ಯಾಣ ಇಲಾಖೆ
ಗೀತಾ ಜಿ. ಹೆಗಡೆ ಎಲ್ಲರನ್ನು ಸ್ವಾಗತಿಸಿದರು.

Share This
300x250 AD
300x250 AD
300x250 AD
Back to top