Slide
Slide
Slide
previous arrow
next arrow

ನ.2ಕ್ಕೆ ‘ಕಲಾ ಸನ್ನಿಧಿ’ ಪುರಸ್ಕಾರ ಪ್ರದಾನ ಸಮಾರಂಭ

300x250 AD

ಯಲ್ಲಾಪುರ: ಕರ್ನಾಟಕ ಕಲಾ ಸನ್ನಿಧಿ ಹಾಗೂ ಮೈತ್ರಿ ಕಲಾ ಬಳಗ ತೇಲಂಗಾರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನ.2ರಂದು ಸಂಜೆ ತೇಲಂಗಾರಿನ ಮೈತ್ರಿ ಕಲಾ ಬಳಗದ ಸಭಾಭವನದಲ್ಲಿ ಕಲಾ ಸನ್ನಿಧಿ ಪುರಸ್ಕಾರ ಪ್ರದಾನ ಸಮಾರಂಭ ಮತ್ತು ತಾಳಮದ್ದಲೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಇಡಗುಂಜಿಯ ಗಣೇಶ ಯಾಜಿ, ಮಹಾಬಲೇಶ್ವರ ಭಟ್ಟ ಬೆಳಸೇರು, ಮಂಜುನಾಥ ಗಾಂವ್ಕರ ಮೂಲೆಮನೆ ಮತ್ತು ವಿವೇಕ ಮರಾಠಿ ಅಂಕೋಲಾ ಇವರಿಗೆ ಕಲಾ ಸನ್ನಿಧಿ ಪುರಸ್ಕಾರ ನೀಡಲಾಗುವುದು. ದಿನೇಶ ಭಟ್ಟ ಯಲ್ಲಾಪುರ ಅಭಿನಂದನಾ ನುಡಿಗಳನ್ನಾಡಲಿದ್ದು, ನಂತರ ಸುಧನ್ವ ಕಾಳಗ ತಾಳಮದ್ದಲೆ ನಡೆಯಲಿದೆ. ಭಾಗವತರಾಗಿ ಗಣೇಶ ಯಾಜಿ, ಚಂದ್ರಶೇಖರ ಹೆಗಡೆ ಕುಂಟೇಮನೆ, ಮದ್ದಲೆಕಾರರಾಗಿ ಸುಬ್ರಾಯ ಭಟ್ಟ ಗಾಣಗದ್ದೆ, ವಿವೇಕ ಮರಾಠಿ ಹಾಗೂ ಪ್ರಸನ್ನ ಹೆಗಡೆ ಕುಂಟೇಮನೆ ಕಾರ್ಯನಿರ್ವಹಿಸುವರು. ಮುಮ್ಮೇಳದ ಕಲಾವಿದರಾಗಿ ಆದಿತ್ಯ ಹೆಗಡೆ ಹೊಸನಗರ, ದಿನೇಶ ಭಟ್ಟ ಯಲ್ಲಾಪುರ, ಶ್ರೀಧರ ಅಣಲಗಾರ, ದೀಪಕ ಭಟ್ಟ ಕುಂಕಿ, ಮಂಜುನಾಥ ಬಾಳೇಜಡ್ಡಿ, ದರ್ಶನ ಕಲ್ಮನೆ, ಗಗನ ಹುಲಿಯಾನಗದ್ದೆ, ವಂದಿತಾ ಮೂಲೆಗದ್ದೆ ಮತ್ತು ಜಯಂತ ಅಬ್ಬೀತೋಟ ವಿವಿಧ ಪಾತ್ರಗಳನ್ನು ನಿರ್ವಹಿಸುವರು.

300x250 AD
Share This
300x250 AD
300x250 AD
300x250 AD
Back to top