Slide
Slide
Slide
previous arrow
next arrow

ಅ.29ಕ್ಕೆ ಭೈರುಂಭೆಯಲ್ಲಿ ‘ಟೆಕ್ನೋಲೋಕ’, ‘ನಮ್ಮ ನಿಮ್ಮೊಳಗೊಬ್ಬ’ ನಾಟಕ ಪ್ರದರ್ಶನ

300x250 AD

ಶಿರಸಿ: ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಭೈರುಂಭೆ, ಮತ್ತು ಗೆಳೆಯರ ಬಳಗ ಭೈರುಂಭೆ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಅ.29, ಭಾನುವಾರ ಸಂಜೆ 5.45 ರಿಂದ 9.15 ರವರೆಗೆ ಹುಳಗೋಳ ಸೇವಾ ಸಹಕಾರಿ ಸಂಘದ ಸಭಾಭವನ, ಭೈರುಂಭೆಯಲ್ಲಿ ಶ್ರೀ ಶಾರದಾಂಬಾ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ವಿಜ್ಞಾನ ನಾಟಕ ಪ್ರದರ್ಶನದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡ ವಸಂತ ಹೆಗಡೆ ಭೈರುಂಭೆ ನಿರ್ದೇಶನದ “ಟೆಕ್ನೋಲೋಕ” ನಾಟಕ ಪ್ರದರ್ಶನಗೊಳ್ಳಲಿದೆ.

ಅಲ್ಲದೇ ಒಡ್ಡೋಲಗ ರಂಗ ಪರ್ಯಟನ 2023 ಹಿತ್ಲಕೈ ಸಿದ್ದಾಪುರ ಇವರು ಅರ್ಪಿಸುವ ನಾಟಕ “ನಮ್ಮ ನಿಮ್ಮೊಳಗೊಬ್ಬ” ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ರಾಜೇಂದ್ರ ಕಾರಂತ ರಚಿಸಿದ್ದು ವಿನ್ಯಾಸ ನಿರ್ದೇಶನ ಗಣಪತಿ ಬಿ. ಹಿತ್ಲಕೈ ಸಂಗೀತ ನಿರ್ವಹಣೆ ಧಾತ್ರಿ ಜಿ. ಹೆಗಡೆ ಹಿತ್ಲಕೈ ನಿರ್ವಹಿಸಿರುತ್ತಾರೆ. ರಂಗದಲ್ಲಿ ನಾಗರಾಜ ಬರೂರು, ಕೇಶವ ಹೆಗಡೆ ಕಿಬ್ಳೆ, ನವೀನಕುಮಾರ ಕುಣಚಿ, ಪುಷ್ಪಾ ರಾಘವೇಂದ್ರ ಸಾಗರ, ಮಾಧವ ಶರ್ಮಾ, ಕಲಗಾರ, ಪ್ರಸನ್ನಕುಮಾರ ಎನ್.ಎಮ್., ಸಾಗರ, ಶ್ರೀರಾಮು ಯು. ಗೌಡ, ಹೊಸೂರು, ಸಂಧ್ಯಾ ಶಾಸ್ತ್ರಿ ಭೈರುಂಭೆ ಇರಲಿದ್ದಾರೆ.
ರಂಗ ಸಜ್ಜಿಕೆ ಹಾಗೂ ಪರಿಕರ ಗುರುಮೂರ್ತಿ ವರದಾಮೂಲ, ಬೆಳಕು ಮತ್ತು ತಾಂತ್ರಿಕ ನಿರ್ವಹಣೆಯನ್ನು ಶ್ರೀಧರ ಭಾಗವತ ಚಿಕ್ಕಹೊನ್ನೇಸರ, ಗಣಪತಿ ಹೆಗಡೆ ವಡ್ಡಿನಗದ್ದೆ, ಮುರುಗೇಶ ಬಸ್ತಿಕೊಪ್ಪ, ನಂದನ ಹೆಗಡೆ ಮಗೇಗಾರ, ರಾಕೇಶ ಭಟ್ಟ ಸಿದ್ದಾಪುರ. ಧ್ವನಿವರ್ಧಕ: ಕಾರ್ತಿಕ ಸೌಂಡ್ಸ್ ಶಿರಸಿ ನಿರ್ವಹಿಸಲಿದ್ದಾರೆ.

300x250 AD

ನಾಟಕಾಸಕ್ತರು, ಸಾರ್ವಜನಿಕರು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಕೋರಿರುತ್ತಾರೆ.

Share This
300x250 AD
300x250 AD
300x250 AD
Back to top