Slide
Slide
Slide
previous arrow
next arrow

ಕುಸ್ತಿ ಉಳಿವಿಗೆ ಹಳಿಯಾಳದ ಪಟುಗಳ ಕೊಡುಗೆ ಹೆಚ್ಚು: ಶಾಸಕ ದೇಶಪಾಂಡೆ

300x250 AD

ಹಳಿಯಾಳ: ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಕುಸ್ತಿ ಕ್ರೀಡೆ ಈಗಲೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ತಾಲೂಕಿನಲ್ಲಿರುವ ಹಿರಿಯ ಹಾಗೂ ಕಿರಿಯ ಕ್ರೀಡಾಪಟುಗಳ ಕೊಡುಗೆ ಸಾಕಷ್ಟಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ತಾಲೂಕಿನ ಕುಸ್ತಿಪಟುಗಳಿಗೆ ಸನ್ಮಾನಿಸಿ ಮಾತನಾಡಿದ ಅವರು, ತಾಲೂಕಿನ ಬೆಳವಟಗಿ ಗ್ರಾಮದ ರೋಹನ ನಾರಾಯಣ ಘೆವಡಿ ಇವರು ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಮೈಸೂರು ದಸರಾ ಕೇಸರಿ-2023ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು ಹೆಮ್ಮೆಯ ಸಂಗತಿ. ತೆಲಂಗಾಣದಲ್ಲಿ ನಡೆದ ರಾಷ್ಟ್ರ ಮಟ್ಟದ 3000 ಸ್ಟಿಫಲ್ ಛೇಸ ಓಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಮಿಂಚಿದ ಹವಗಿ ಗ್ರಾಮದ ಪ್ರಕಾಶ ಗಣಪತಿ ಮಳಿಕ ಇವರ ಸಾಧನೆಯು ಅಮೋಘವಾದದ್ದು. ಭವಿಷ್ಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶ- ವಿದೇಶಗಳನ್ನು ಪ್ರತಿನಿಧಿಸುವಂತ ಅವಕಾಶ ಒದಗಿಬರಲೆಂದು ಅಭಿನಂದಿಸಿ ಶುಭ ಹಾರೈಸಿದರು.

300x250 AD
Share This
300x250 AD
300x250 AD
300x250 AD
Back to top