Slide
Slide
Slide
previous arrow
next arrow

ಗೋಕರ್ಣ ಕಡಲತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿ

300x250 AD

ಗೋಕರ್ಣ: ಸರಣಿ ರಜೆಯ ಹಿನ್ನೆಲೆಯಲ್ಲಿ ಗೋಕರ್ಣಕ್ಕೆ ಭಕ್ತ ಸಾಗರವೇ ಹರಿದುಬಂದಿದೆ. ಶಕ್ತಿಯೋಜನೆಯಿಂದಾಗಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಗಳಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇದರ ಜತೆಗೆ ರಾಜ್ಯದ ನಾನಾ ಭಾಗಗಳಿಂದಲೂ ಭಕ್ತ ಆಗಮನವಾಗಿತ್ತು. ಆದರೆ ಸ್ಥಳೀಯ ಗ್ರಾ.ಪಂ.ನವರು ಮಾತ್ರ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡದೇ ಹಾಗೆ ಬಿಟ್ಟಿರುವುದು ಗೋಕರ್ಣ ಕ್ಷೇತ್ರಕ್ಕೆ ಕಪ್ಪುಚುಕ್ಕೆ ಎನ್ನುವಂತಾಗಿದೆ.

ಇಲ್ಲಿಯ ಪ್ರಮುಖ ಕಡಲ ತೀರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ ಕಡಲ ತೀರದ ಪಕ್ಕದಲ್ಲಿಯೇ ಸಾಕಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳು ರಾಶಿ ರಾಶಿಯಾಗಿ ಬಿದ್ದಿರುವುದು ನಿಜಕ್ಕೂ ವಿಪರ್ಯಾಸ. ಹಾಗೇ ಜಾನುವಾರುಗಳು ಕೂಡ ಇಲ್ಲಿಗೆ ಬಂದು ಪ್ಲಾಸ್ಟಿಕ್ ತ್ಯಾಜ್ಯವನ್ನು ತಿನ್ನುತ್ತಿರುವುದು ಸಹಜವಾಗಿಯೇ ಕಂಡುಬರುತ್ತದೆ.

ಇನ್ನು ಇತರೆ ಬೀಚ್‌ಗಳಲ್ಲಿ ಪ್ರವಾಸಿಗರು ಇರುವುದರಿಂದ ಕೆಲವು ಆಯಾ ಭಾಗಗಳಲ್ಲಿ ರೆಸಾರ್ಟ್ನವರೇ ಅದನ್ನು ಸ್ವಚ್ಛಗೊಳಿಸುತ್ತಾರೆ. ಇಲ್ಲದಿದ್ದರೆ ತಮ್ಮ ರೆಸಾರ್ಟ್ಗೆ ಕೆಟ್ಟ ಹೆಸರು ಬರುತ್ತದೆ ಎಂಬ ಭಯಕ್ಕಾಗಿ. ಆದರೆ ಇಲ್ಲಿಯ ಮುಖ್ಯ ಕಡಲತೀರ ಧಾರ್ಮಿಕ ವಿಧಿ ವಿಧಾನ ಪೂರೈಸಲು ಹೀಗೆ ಧಾರ್ಮಿಕ ಧಾರ್ಮಿಕ ಭಾವನೆಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ಇಲ್ಲಿ ಯಾವುದೇ ರೆಸಾರ್ಟ್ಗಳಿಲ್ಲ. ಹೀಗಾಗಿ ಅಲ್ಲಿ ಬಿದ್ದಿರುವ ಕಸಗಳನ್ನು ಪಂಚಾಯಿತಿಯವರೇ ಸ್ವಚ್ಛಗೊಳಿಸಬೇಕಿದೆ. ಪ್ರತಿದಿನ ಪಂಚಾಯಿತಿಯವರು ಅದನ್ನು ಸಾಗಿಸಬೇಕು ಎನ್ನುವುದು ಭಕ್ತರ ಅಭಿಪ್ರಾಯವಾಗಿದೆ.

300x250 AD

ಇಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಕೂಡ ಸ್ವಚ್ಛತೆಯ ಬಗ್ಗೆ ಮಾತ್ರ ಕಿಂಚಿತ್ತು ಯೋಚನೆ ಮಾಡುವವರಿಲ್ಲದಂತಾಗಿದೆ. ಆಯಾ ಸಣ್ಣಪುಟ್ಟ ಅಂಗಡಿಕಾರರಿಂದ ಹಿಡಿದು ಪ್ರವಾಸಿಗರವರೆಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲಿಯ ಪ್ರಮುಖ ಕಡಲತೀರ ವಿಶಾಲವಾಗಿರುವುದರಿಂದ ಅಲ್ಲಲ್ಲಿ ತ್ಯಾಜ್ಯದ ತೊಟ್ಟಿ ಇಟ್ಟಿದ್ದರೆ ಅಷ್ಟು ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಇಲ್ಲಿ ಯಾವುದೇ ಕಸದ ತೊಟ್ಟಿ ಇಲ್ಲದಿರುವುದು ಅಲ್ಲಲ್ಲಿ ಕಸ ಬೀಳಲು ಕಾರಣವಾಗಿದೆ. ಇನ್ನಾದರೂ ಗ್ರಾ.ಪಂ.ನವರು ಕಸದ ತೊಟ್ಟಿಯನ್ನು ಇಡುವುದರ ಜತೆಗೆ ಪ್ರತಿನಿತ್ಯ ಸ್ವಚ್ಛತೆ ಮಾಡುವುದು ಕೂಡ ಅವರ ಕೆಲಸವಾಗಬೇಕು.

Share This
300x250 AD
300x250 AD
300x250 AD
Back to top