Slide
Slide
Slide
previous arrow
next arrow

ಜೋಯಿಡಾದಲ್ಲಿ ಜಿಂಕೆ ಕೋಡು ವಶ: ಓರ್ವನ ಬಂಧನ

300x250 AD

ಜೋಯಿಡಾ: ಎರಡು ಜಿಂಕೆಗಳ ಕೋಡನ್ನು ಮನೆಯಲ್ಲಿ ಇಟ್ಕೊಂಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಜಿಂಕೆಯ ಕೋಡನ್ನು ವಶಪಡಿಸಿಕೊಂಡು ಹಾಗೂ ಓರ್ವನನ್ನು ಬಂಧಿಸಿದ ಘಟನೆ ತಾಲೂಕು ಕೇಂದ್ರದಲ್ಲಿ ಗುರುವಾರ ನಡೆದಿದೆ.

ತಾಲೂಕು ಕೇಂದ್ರದಲ್ಲಿರುವ ಶಿವಾಜಿ ವೃತ್ತದ ಹತ್ತಿರ ಇರುವ ಮನೆಯೊಂದರಲ್ಲಿ ಎರಡು ಜಿಂಕೆಗಳ ಕೋಡು ಪತ್ತೆಯಾಗಿದೆ. ಇದರ ಜೊತೆಯಲ್ಲಿ ಹುಲಿ ಉಗುರು ಇರುವುದರ ಬಗ್ಗೆ ಮಾಹಿತಿ ಲಭ್ಯವಾಗಿದ್ದ ಹಿನ್ನಲೆಯಲ್ಲಿ ದಾಳಿ ನಡೆಸಿದ್ದು ಆದರೆ ಹುಲಿ ಉಗುರು ಪತ್ತೆಯಾಗಿಲ್ಲ ಎನ್ನಲಾಗಿದೆ. ಇನ್ನು  ಜೋಯಿಡಾದ ಶಿವಾಜಿ ವೃತ್ತದ ಬಳಿಯ ನಿವಾಸಿ ಪ್ರಕಾಶ್ ನಾಯ್ಕ ಎಂಬಾತನೇ ಆರೋಪಿಯಾಗಿದ್ದು ಈತನನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಯ ವಿಚಾರಣೆ ದಾಂಡೇಲಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ನಡೆಸಲಾಗಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ.ಶೇಟ್ ಅವರ ನೇತೃತ್ವದಲ್ಲಿ, ಜೋಯಿಡಾ ವಲಯಾರಣ್ಯಾಧಿಕಾರಿ ಮಹಮ್ಮದ್ ಶಫಿ, ಬರ್ಚಿ ವಲಯಾರಣ್ಯಾಧಿಕಾರಿ ಅಶೋಕ್ ಶೆಳ್ಳೆನ್ನವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

300x250 AD

Share This
300x250 AD
300x250 AD
300x250 AD
Back to top