ಹೊನ್ನಾವರ: ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕಸ್ತೂರಿ ರಂಗನ್ ವರದಿ ಕರಡು ಪ್ರಕಟಣೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವ ಹಳ್ಳಿಗಳನ್ನು ಸೇರಿಸಲು ವಿರೋಧಿಸಿ, ಆಕ್ಷೇಪಣೆಯ ನಿರ್ಣಯವನ್ನು ಗ್ರಾಮ ಪಂಚಾಯತ ಸಭೆಯಲ್ಲಿ ನಿರ್ಣಯಿಸಲು ಆಗ್ರಹಿಸಿ ಹೊನ್ನಾವರ ತಾಲೂಕಿನ ಏಂಟು ಗ್ರಾಮ ಪಂಚಾಯತ ಅಧ್ಯಕ್ಷರುಗಳಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ಹಾಗೂ ತಾಲೂಕ ಅಧ್ಯಕ್ಷ ಚಂದ್ರಕಾಂತ ಕೊಚರೇಕರ್ ನೇತೃತ್ವದಲ್ಲಿ ಹೋರಾಟಗಾರರ ವೇದಿಕೆ ನಿಯೋಗದ ಮನವಿ ನೀಡುವ ಕಾರ್ಯಕ್ರಮ ಜರುಗಿದವು.
ಕಸ್ತೂರಿ ರಂಗನ್ ವರದಿ ಕರಡು ಪ್ರಕಟಣೆಯಲ್ಲಿ ಹೊನ್ನಾವರ ತಾಲೂಕಿನ, 19 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ, 46 ಹಳ್ಳಿಗಳನ್ನ ಪರಿಸರ ಸೂಕ್ಷ್ಮ ಪ್ರದೇಶವೆಂದು ಪ್ರಕಟಿಸಲಾಗಿದ್ದು, ಇವುಗಳನ್ನ ಪರಿಸರ ಸೂಕ್ಷ್ಮ ಪ್ರದೇಶದಿಂದ ಮುಕ್ತಗೊಳಿಸಲು ನಿರ್ಣಯಿಸಲು ನಿಯೋಗವು ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಆಗ್ರಹಿಸಿದರು.
ಹೊನ್ನಾವರ ತಾಲೂಕಿನ ನಗರಬಸ್ತಿಕೇರಿ, ಉಪ್ಪೋಣಿ, ಹೇರಂಗಡಿ, ಜಲವಳ್ಳಿ, ಸಾಲ್ಕೋಡ್, ಚಿತ್ತಾರ, ಕೊಡಾಣಿ, ಮಾಗೋಡ ಗ್ರಾಮ ಪಂಚಾಯತ ಅಧ್ಯಕ್ಷರುಗಳಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರುಗಳಾದ ಸವಿತಾ ಹೆಗಡೆ, ಗಣೇಶ್ ನಾಯ್ಕ, ಶ್ರೀಮತಿ ರೀನಾ, ಗೀತಾ ಮೊಗೇರ್, ಉಪಾಧ್ಯಕ್ಷರಾದ ಮಂಜುನಾಥ ನಾಯ್ಕ ಉಪಸ್ಥಿತರಿದ್ದರು.
ನಿಯೋಗದಲ್ಲಿ ಜಿಲ್ಲಾ ಸಂಚಾಲಕರಾದ ರಾಮಾ ಮರಾಠಿ, ಸುರೇಶ್ ನಾಯ್ಕ ನಗರಬಸ್ತಿಕೇರಿ, ಮಹೇಶ್ ನಾಯ್ಕ ಸಾಲ್ಕೋಡ್, ವಿನೋಧ ನಾಯ್ಕ ಯಲಕೊಟಗಿ, ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ಜಿ.ಬಿ. ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ತಾಲೂಕ ಅಧ್ಯಕ್ಷ ಚಂದ್ರಕಾಂತ ಕೊಚರೇಕರ್ ಕಸ್ತೂರಿ ರಂಗನ್ ವಿರೋಧ ವ್ಯಕ್ತಪಡಿಸಲು ತಾಲೂಕಾದ್ಯಂತ ಜನಜಾಗೃತಿ ಮಾಡಲಾಗುವುದಲ್ಲದೇ, ಸಾಂಘೀಕ ಹೋರಾಟ ಮಾಡಲಾಗುವುದೆಂದು ಅವರು ಹೇಳಿದರು.
ಹೊನ್ನಾವರ ತಾಲೂಕಿನಲ್ಲಿ 46 ಪರಿಸರ ಸೂಕ್ಷ್ಮ ಹಳ್ಳಿಗಳು:
ಹೊನ್ನಾವರ ತಾಲೂಕಿನ ನಗರಬಸ್ತಿಕೇರಿ ಗ್ರಾಮ ಪಂಚಾಯತದಲ್ಲಿ 7 ಹಳ್ಳಿ, ಉಪ್ಪೋಣಿ 3, ಹೇರಂಗಡಿ 2, ಜಲವಳ್ಳಿ 2, ಸಾಲ್ಕೋಡ್ 1, ಚಿತ್ತಾರ 6, ಕೊಡಾಣಿ 1, ಮಾಗೋಡ 2, ಚಂದಾವರ 3, ಚಿಕ್ಕನಗೋಡ 4, ಕುದರಗಿ 1, ಕಡ್ಲೆ 1, ಮಂಕಿ-1 1, ಗುಣವಂತೆ 1, ಬಳಕೂರ 2, ಇಡಗುಂಜಿ 1, ಮಂಕಿ-2 1, ಅನಂತವಾಡಿ 5 ಹಳ್ಳಿ ಹೀಗೆ ಹೊನ್ನಾವರ ತಾಲೂಕಿನಲ್ಲಿ ಒಟ್ಟು 46 ಹಳ್ಳಿಗಳು ಕರಡು ಅಧಿಸೂಚನೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಪ್ರಕಟಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.