Slide
Slide
Slide
previous arrow
next arrow

ನಾಡಿನ ಜನತೆಗೆ ವಿಜಯದಶಮಿ ಶುಭಹಾರೈಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು

300x250 AD

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ವಿಜಯದಶಮಿ ಸಂದರ್ಭದಲ್ಲಿ ದೇಶದ ಜನರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು  ಹಾರೈಸಿದ್ದಾರೆ.

ರಾಷ್ಟ್ರಪತಿಗಳು ತಮ್ಮ ಸಂದೇಶದಲ್ಲಿ, ದಸರಾ ಹಬ್ಬವು ಕೆಟ್ಟದ್ದರ ವಿರುದ್ಧ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ. ಪೂರ್ವ ಮತ್ತು ದಕ್ಷಿಣ ರಾಜ್ಯಗಳು ದುಷ್ಟ ರಾಕ್ಷಸ ಮಹಿಷಾಸುರನ ವಿರುದ್ಧ ದುರ್ಗಾದೇವಿಯ ವಿಜಯವೆಂದು ದಸರಾವನ್ನು ಆಚರಿಸಿದರೆ, ಉತ್ತರ ಮತ್ತು ಪಶ್ಚಿಮ ರಾಜ್ಯಗಳು ಈ ಹಬ್ಬವನ್ನು ರಾವಣನ ಮೇಲೆ ರಾಮನ ವಿಜಯವೆಂದು ಆಚರಿಸುತ್ತವೆ ಎಂದು ಅವರು ಹೇಳಿದರು.

ಕೆಟ್ಟದನ್ನು ಸಂಕೇತಿಸುವ ಅಹಂಕಾರ ಮತ್ತು ನಕಾರಾತ್ಮಕತೆಯನ್ನು ತೊಡೆದುಹಾಕಲು ಮತ್ತು ‘ಒಳ್ಳೆಯ’ ಸಂಕೇತವಾಗಿರುವ ಎಲ್ಲರಿಗೂ ಏಕತೆ ಮತ್ತು ಪ್ರೀತಿಯ ಭಾವನೆಗಳನ್ನು ಅಳವಡಿಸಿಕೊಳ್ಳಲು ದಸರಾ ಜನರಿಗೆ ಕಲಿಸುತ್ತದೆ. ಭಗವಾನ್ ರಾಮನ ಮೌಲ್ಯಗಳು ಜೀವನದ ಕಠಿಣ ಪರೀಕ್ಷೆಗಳು ಮತ್ತು ಪ್ರತಿಕೂಲಗಳ ನಡುವೆಯೂ ಧರ್ಮದ ಹಾದಿಯಲ್ಲಿ ನಡೆಯಲು ಪ್ರೇರೇಪಿಸುತ್ತವೆ ಎಂದು ಅವರು ಹೇಳಿದರು.

300x250 AD

ಉಪರಾಷ್ಟ್ರಪತಿ ಧಂಖರ್ ಅವರು ತಮ್ಮ ಸಂದೇಶದಲ್ಲಿ ದಸರಾ ನಮ್ಮ ಧರ್ಮದ ನಂಬಿಕೆಯನ್ನು ಪುನರುಚ್ಚರಿಸಲು ಮತ್ತು ಸತ್ಯ, ನ್ಯಾಯ, ಸಹಾನುಭೂತಿ ಮತ್ತು ಧೈರ್ಯದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮತ್ತು ಪಾಲಿಸಲು ಒಂದು ಸಂದರ್ಭವಾಗಿದೆ ಎಂದು ಹೇಳಿದರು. ಹಬ್ಬವು ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆಯನ್ನು ತರಲಿ ಎಂದು ಹಾರೈಸಿದರು.

“ನಾಡಿನಾದ್ಯಂತ ಇರುವ ನನ್ನ ಕುಟುಂಬದ ಸದಸ್ಯರಿಗೆ ವಿಜಯದಶಮಿಯ ಶುಭಾಶಯಗಳು. ಈ ಪವಿತ್ರ ಹಬ್ಬವು ನಕಾರಾತ್ಮಕ ಶಕ್ತಿಗಳನ್ನು ಕೊನೆಗೊಳಿಸುವುದರ ಜೊತೆಗೆ ಜೀವನದಲ್ಲಿ ಒಳ್ಳೆಯತನವನ್ನು ಅಳವಡಿಸಿಕೊಳ್ಳುವ ಸಂದೇಶವನ್ನು ತರುತ್ತದೆ” ಎಂದು ಪ್ರಧಾನಿ ಮೋದಿ ಟ್ವಿಟ್‌ ಮಾಡಿದ್ದಾರೆ.

Share This
300x250 AD
300x250 AD
300x250 AD
Back to top