ದಾಂಡೇಲಿ: ನವರಾತ್ರಿ ಉತ್ಸವ ಸಮಿತಿಯ ಆಶ್ರಯದಡಿ ಹಳೆ ನಗರಸಭೆಯ ಮೈದಾನದಲ್ಲಿ ಆಯೋಜಿಸಲಾಗಿರುವ ನವರಾತ್ರಿ ಉತ್ಸವದ ಎಂಟನೇ ದಿನವಾದ ಭಾನುವಾರ ವಿಶೇಷ ಪೂಜೆ ಹಾಗೂ ಶ್ರೀಸೂಕ್ತ ಹವನ ಹಾಗೂ ಶಾಂತಿಹೋಮದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಸಮಿತಿಯ ಪದಾಧಿಕಾರಿ ರೋಷನ್ ನೇತ್ರಾವಳಿ ಹಾಗೂ ಅವರ ಪತ್ನಿ ಶಾಂತಾಳ ನೇತ್ರಾವಳಿ ಪೂಜೆಯಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷರಾದ ಟಿ ಎಸ್ ಬಾಲಮಣಿ, ಸಮಿತಿಯ ಪ್ರಮುಖರುಗಳಾದ ನರೇಂದ್ರ ಚೌವ್ಹಾಣ್, ಬಿ.ಎನ್.ವಾಸರೆ, ಅಶುತೋಷ್ ಕುಮಾರ್ ರಾಯ್, ಸುಧಾಕರ್ ಶೆಟ್ಟಿ, ಬಸವರಾಜ ಕಲಶೆಟ್ಟಿ, ಸುರೇಶ್ ಕಾಮತ್, ಮಿಥುನ್ ನಾಯಕ, ಶಾರದಾ ಪರಶುರಾಮ, ಗೀತಾ ಶಿಕಾರಿಪುರ ಹಾಗೂ ರೋಷನ್ ನೇತ್ರಾವಳಿಯವರ ತಾಯಿ ಗೀತಾ ನೇತ್ರಾವಳಿ ಹಾಗೂ ಪುತ್ರ ನಂದನ್ ನೇತ್ರಾವಳಿ ಉಪಸ್ಥಿತರಿದ್ದರು.
ಜೊತೆ ಜೊತೆಗೆ ಮುಕ್ತ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಚೆಸ್ ಪಂದ್ಯಾವಳಿಯಲ್ಲಿ ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷರಾದ ಟಿ.ಎಸ್.ಬಾಲಮಣಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ.ಎನ್, ವಾಸರೆ, ಉದ್ಯಮಿಗಳಾದ ಅಶುತೋಷ್‌ಕುಮಾರ್ ರಾಯ್, ಸುಧಾಕರ್ ಶೆಟ್ಟಿ, ಗಾಯಕ ಸುರೇಶ್ ಕಾಮತ್ ಸ್ಪರ್ಧಾಳುಗಳಾಗಿ ಭಾಗವಹಿಸಿ ಗಮನ ಸೆಳೆದರು. ಕಾರ್ಯಕ್ರಮದ ಯಶಸ್ಸಿಗೆ ನವರಾತ್ರಿ ಉತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಶ್ರಮಿಸಿದ್ದರು.