ಮೈಸೂರು: ಮೈಸೂರಿನ ಸವಿಗನ್ನಡ ಪತ್ರಿಕೆ ಮತ್ತು ಹೊಯ್ಸಳ ಕನ್ನಡ ಸಂಘ ವತಿಯಿಂದ ಹೊಸಮಠ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಯತ್ರಿ ಮತ್ತು ಅರ್ಥಶಾಸ್ತ್ರ ಉಪನ್ಯಾಸಕಿ ಎನ್.ಆರ್. ರೂಪಶ್ರೀ ಅವರಿಗೆ ಸಾಹಿತ್ಯ ಸಾಧನೆಗಾಗಿ 2023 ನೇ ಸಾಲಿನ ದಸರೆಯ ಕವಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ವೇಳೆ ವೇದಿಕೆಯಲ್ಲಿ ಮಹಾಕವಿ ಲತಾ ರಾಜಶೇಖರ್, ಸಮಾಜ ಸೇವಕ ರಘುರಾಮ ವಾಜಪೇಯಿ ಕಸಾಪ ಮೈಸೂರು ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಪತ್ರಕರ್ತ ರಂಗನಾಥ್ ಮೊದಲಾದವರು ಉಪಸ್ಥಿತರಿದ್ದರು.
ಎನ್. ಆರ್. ರೂಪಶ್ರೀ ಮೂಲತಃ ಶಿರಸಿಯವರಾಗಿದ್ದು ಪ್ರಸ್ತುತ ಮೈಸೂರಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ, ಲೇಖಕಿಯರ ಪರಿಷತ್ತಿನ ಗುಡಿಬಂಡೆ ಪೂರ್ಣಿಮಾ ದತ್ತಿ ನಿಧಿ ಪ್ರಶಸ್ತಿ ಮೈಸೂರಿನ ಸಾಂಸ್ಕೃತಿಕ ಪ್ರತಿಷ್ಠಾನದ ಸಾಹಿತ್ಯ ಸಿಂಧು ಪ್ರಶಸ್ತಿ ಮೊದಲಾದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರೂಪಶ್ರೀ ಕೆಡಿಸಿಸಿ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರಾದ ಆರ್. ಎಸ್. ಭಟ್ ಮತ್ತು ಶ್ರೀಮತಿ ಅನುಸೂಯ ದಂಪತಿಗಳ ಪುತ್ರಿ. ಮೈಸೂರಿನ ಸದ್ವಿದ್ಯಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮಚಂದ್ರ ಭಟ್ಟ ಅವರ ಧರ್ಮಪತ್ನಿ.