Slide
Slide
Slide
previous arrow
next arrow

ಪದವಿ ಶಿಕ್ಷಣ ಜೀವನದ ಪ್ರಮುಖ‌ ಘಟ್ಟ: ಡಾ.ಟಿ.ಎಸ್.ಹಳೆಮನೆ

300x250 AD

ಶಿರಸಿ: ಎಂಇಎಸ್ ಎಂ‌ಎಂ ಕಲಾ ಮತ್ತು ವಿಜ್ಞಾನ ಮಹಾವಿಲಯದಲ್ಲಿ ಐಕ್ಯುಎಸಿ ಸಂಯೋಜನೆಯಲ್ಲಿ ವಿದ್ಯಾರ್ಥಿ ಕಲ್ಯಾಣ ವಿಭಾಗ ಬಿಎ, ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪರಿಚಯ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ ಪದವಿ ಶಿಕ್ಷಣ ಜೀವನದ ಪ್ರಮುಖ ಘಟ್ಟವಾಗಿದ್ದು ಶ್ರದ್ಧೆಯಿಂದ ಓದಿ ಕೌಶಲ್ಯ ವೃದ್ಧಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಕಾರ್ಯ ನಮ್ಮ ಮಹಾವಿದ್ಯಾಲಯ ಮಾಡುತ್ತಲೇ ಬಂದಿದೆ. ಕಚ್ಚಾ ವಸ್ತುಗಳಾಗಿ ಇಲ್ಲಿ ಬಂದಿದ್ದೀರಿ ನಿಮ್ಮನ್ನ ಉತ್ತಮ ಮಾರ್ಗದರ್ಶನದ ಮೂಲಕ ಕೌಶಲ್ಯಭರಿತರನ್ನಾಗಿ ಮಾಡುವ ಕಾರ್ಯ ಮಾಡುತ್ತವೆ ಎಂದರು.

300x250 AD

ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಂಚಾಲಕ ಡಾ. ಎಸ್. ಎಸ್. ಭಟ್, ರಾಜ್ಯಶಾಸ್ತ್ರ ಮುಖ್ಯಸ್ಥ ಎಂ.ಎನ್. ಭಟ್, ಡಾ ಸುಜಾತಾ ಪಾತರಪೇಕರ್ ಉಪಸ್ಥತರಿದ್ದರು. ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಜಿ.ಟಿ. ಭಟ್ ಸ್ವಾಗತಿಸಿ ಪ್ರಾಸ್ತಾವಿಸಿದರು.

Share This
300x250 AD
300x250 AD
300x250 AD
Back to top