ಶಿರಸಿ: ಇಲ್ಲಿನ ನಾಟ್ಯದೀಪ ಕಲ್ಚರಲ್ ಟೀಂ ಸೋಂದಾ ಸ್ವರ್ಣವಲ್ಲೀಯಲ್ಲಿ ಶರನ್ನವರಾತ್ರಿ ಉತ್ಸವದ ನಿಮಿತ್ತ ಹಮ್ಮಿಕೊಂಡ ಸಾಂಸ್ಕೃತಿಕ ಸಂಭ್ರಮದಲ್ಲಿ ತಾಯಿ ಮಗಳ ನೇತೃತ್ವದಲ್ಲಿ ನಡೆಸಿದ ಭರತನಾಟ್ಯ ರೂಪಕವು ಗಮನ ಸೆಳೆಯಿತು.
ವಿದೂಷಿ ಸೀಮಾ ಭಾಗ್ವತ್ ಹಾಗೂ ವಿದೂಷಿ ದೀಪಾ ಭಾಗ್ವತ್ ನಡೆಸಿದ ಶಾರದಾ ಸ್ತುತಿ ಹಾಗೂ ಶ್ರೀಕೃಷ್ಣನ ಬಾಲ ಲೀಲೆ ಕುರಿತಾದ ರೂಪಕ ಪ್ರೇಕ್ಷಕರ ಮನ ಸೆಳೆದವು. ನಾಟ್ಯದೀಪ ಟೀಂನ ವಿದ್ಯಾರ್ಥಿಗಳು ವಿವಿಧ ನೃತ್ಯ ಬಂಧಗಳಿಗೆ ಜೀವ ತುಂಬಿದರು.