Slide
Slide
Slide
previous arrow
next arrow

ನಿಯಂತ್ರಣ ತಪ್ಪಿ ಸರಕು ತುಂಬಿದ ಲಾರಿ ಪಲ್ಟಿ

300x250 AD

ಹೊನ್ನಾವರ: ಪಟ್ಟಣದ ರಾಮತೀರ್ಥ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಸರಕು ತುಂಬಿದ ಲಾರಿ ಪಲ್ಟಿಯಾಗಿದೆ. ಕುಮಟಾದಿಂದ ಹೊನ್ನಾವರ ಮಾರ್ಗವಾಗಿ ಸಂಚರಿಸುತ್ತಿದ್ದ ಸಿಮೆಂಟ್ ತುಂಬಿದ ವಾಹನ ಅಪಘಾತಕ್ಕಿಡಾಗಿದೆ. ರಾಮತೀರ್ಥ ಕ್ರಾಸ್ ಸಮೀಪ ಬರುತ್ತಿದ್ದಂತೆ ವಾಹನದ ಸ್ಟೆರಿಂಗ್ ಲಾಕ್ ಆಗಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಹೆದ್ದಾರಿ ಮಧ್ಯದ ಡಿವೈಡರ್ ಗುದ್ದಿ ಬಲಭಾಗಕ್ಕೆ ತಿರುಗಿ ಪಕ್ಕದ ಚರಂಡಿಗೆ ಇಳಿದಿದೆ.

ಅದೃಷ್ಟವಶಾತ್ ಮನೆಗೆ ನುಗ್ಗುವುದು ತಪ್ಪಿದಂತಾಗಿದೆ. ಕ್ರೆನ್ ಮೂಲಕ ಲಾರಿ ಮೇಲೆತ್ತಲಾಯಿತು. ಕೆಲಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು. ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

300x250 AD
Share This
300x250 AD
300x250 AD
300x250 AD
Back to top