Slide
Slide
Slide
previous arrow
next arrow

ಬಿಟುಮಿನ್ ಸಾಗಾಟಕ್ಕೆ ಸ್ಥಳೀಯರಿಗೆ ಸಿಗದ ಆದ್ಯತೆ; ಇಂದು ಟ್ಯಾಂಕರ್ ತಡೆಗೆ ನಿರ್ಧಾರ

300x250 AD

ಕಾರವಾರ: ಬಿಟುಮಿನ್ (ದ್ರವ ರೂಪದ ಡಾಂಬರ್) ಸಾಗಾಟಕ್ಕೆ ಕಂಪನಿಗಳು ಸ್ಥಳೀಯ ಟ್ಯಾಂಕರ್‌ಗಳನ್ನು ಬಳಸದೆ, ಹೊರ ರಾಜ್ಯದವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಹೀಗಾಗಿ ಬುಧವಾರ ಸಂಜೆಯಿoದ ಈ ಮಾರ್ಗದ ಎಲ್ಲಾ ಬಿಟುಮಿನ್ ಸಾಗಾಟದ ಟ್ಯಾಂಕರ್‌ಗಳನ್ನು ಅಂಕೋಲಾ ಹಟ್ಟಿಕೇರಿ ಟೋಲ್‌ಗಳಲ್ಲಿ ತಡೆದು ಪ್ರತಿರೋಧ ವ್ಯಕ್ತಪಡಿಸಲಾಗುವುದು ಎಂದು ಟ್ಯಾಂಕರ್ ಲಾರಿ ಚಾಲಕ- ಮಾಲಕರ ಸಂಘದ ಜಿಲ್ಲಾಧ್ಯಕ್ಷ ಗಣಪತಿ ಮೂಲೆಮನೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಅನೇಕ ವರ್ಷಗಳಿಂದ ಟ್ಯಾಂಕರ್ ಬ್ಯುಸಿನೆಸ್ ಮಾಡಿಕೊಂಡು ಬಿಟುಮಿನ್ ಸಾಗಾಟ ಮಾಡುತ್ತಾ ಜೀವನ ಕಂಡುಕೊoಡಿದ್ದೇವೆ. ಅನೇಕ ಚಾಲಕರುಗಳಿಗೆ ಟ್ಯಾಂಕರೇ ಜೀವನಾಧಾರವಾಗಿದೆ. ಆದರೆ ಇತ್ತೀಚಿಗಿನ ವರ್ಷಗಳಲ್ಲಿ ಟ್ಯಾಂಕರ್ ಚಾಲಕ- ಮಾಲಕರ ಪರಿಸ್ಥಿತಿ ಹದಗೆಟ್ಟಿದೆ. ಕಾರವಾರದಿಂದ ಹೊರ ರಾಜ್ಯಗಳಿಗೆ ಬಿಟುಮಿನ್ ಸಾಗಾಟಕ್ಕೂ ಹೊರ ರಾಜ್ಯದ ಟ್ಯಾಂಕರ್‌ಗಳನ್ನ ಬಳಸಲಾಗುತ್ತಿದ್ದು, ಇದರಿಂದಾಗಿ ಬಿಟುಮಿನ್ ಸಾಗಾಟದಲ್ಲಿ ಜೀವನ ಕಂಡುಕೊ0ಡಿದ್ದ ಟ್ಯಾಂಕರ್ ಚಾಲಕ- ಮಾಲಕರು ಇದೀಗ ಕೆಲಸವಿಲ್ಲದೆ ನಿರುದ್ಯೋಗಿಗಳಾಗುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಾರವಾರದಿಂದ ಆಂಧ್ರಪ್ರದೇಶ, ಮಹಾರಾಷ್ಟ್ರ, ಮುಂಬೈಗೆ ಬಿಟುಮಿನ್ ಸಾಗಿಸಲಾಗುತ್ತದೆ. ಆದರೆ ಹೀಗೆ ಸಾಗಾಟ ಮಾಡಲು ಸ್ಥಳೀಯ ಟ್ಯಾಂಕರ್‌ಗಳನ್ನು ಬಳಸದೆ, ಬಿಟುಮಿನ್ ಕಂಪನಿಗಳ ಉದ್ಯೋಗಿಗಳ, ಟ್ರೇಡರ್ಸ್ನ ಹೊರ ರಾಜ್ಯದ ಟ್ಯಾಂಕರ್‌ಗಳನ್ನು ಬಳಸಲಾಗುತ್ತಿದೆ. ಇದರಿಂದಾಗಿ ಸ್ಥಳೀಯರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಈ ಹಿಂದಿನ ಜಿಲ್ಲಾಧಿಕಾರಿ, ಶಾಸಕರಿಗೂ ತಿಳಿಸಿದ್ದೇವೆ. ಆದರೆ ಯಾವುದೇ ಸ್ಪಂದನೆ ನಮಗೆ ಸಿಕ್ಕಿಲ್ಲ. ಹೀಗಾಗಿ ಅನಿರ್ಧಿಷ್ಟಾವಧಿಯವರೆಗೆ ಖಾಲಿ ಟ್ಯಾಂಕರ್‌ಗಳನ್ನ ತಡೆದು ಪ್ರತಿರೋಧ ತೋರಲು ನಾವೆಲ್ಲ ನಿರ್ಣಯಕ್ಕೆ ಬಂದಿದ್ದೇವೆ. ಸ್ಥಳೀಯ ಟ್ಯಾಂಕರ್‌ಗಳನ್ನು ತೆಗೆದುಕೊಳ್ಳದಿದ್ದರೆ ಬಿಟುಮಿನ್ ಲೋಡ್ ಮಾಡಲು ನಾವು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

300x250 AD

ಈ ಬಗ್ಗೆ ಹಾಲಿ ಶಾಸಕರ ಬೆಂಬಲ ಕೇಳುತ್ತೇವೆ. ನಮ್ಮ ಕಷ್ಟದ ಅರಿವು ಅವರಿಗಿದೆ. ಹೀಗಾಗಿ ಈಗಿನ ಶಾಸಕರ ಮೇಲೆ ಭರವಸೆ ಇಟ್ಟುಕೊಂಡಿದ್ದೇವೆ. ಬುಧವಾರ ಬೆಳಿಗ್ಗೆ ಶಾಸಕರೊಂದಿಗೆ ಮಾತನಾಡಿ, ಸಂಜೆಯಿ0ದ ವಾಹನಗಳನ್ನ ತಡೆಯುತ್ತೇವೆ. ಹೊರ ರಾಜ್ಯದ 10 ಟ್ಯಾಂಕರ್‌ಗಳನ್ನ ಪಡೆಯುವುದಾದರೆ, ಸ್ಥಳೀಯ 10 ಟ್ಯಾಂಕರ್‌ಗಳಿಗೂ ಬಿಟುಮಿನ್ ಲೋಡ್ ಮಾಡಿ ಸಾಗಾಟಕ್ಕೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಯಾರಿಗೂ ಲೋಡ್- ಸಾಗಾಟಕ್ಕೆ ನಾವು ಅವಕಾಶ ನೀಡುವುದಿಲ್ಲ. ಕಡಿಮೆ ಬಾಡಿಗೆಗಾದರೆ ನಮ್ಮ ಟ್ಯಾಂಕರ್‌ಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಕಂಪನಿಯವರು ಹೇಳುತ್ತಿದ್ದಾರೆ. ಆದರೆ ಅವರು ಹೇಳಿದಷ್ಟು ದರ ಡೀಸೆಲ್‌ಗೂ ಪೂರೈಸುವುದಿಲ್ಲ. ಕೆಲವರು ಅಲ್ಲಿ ಹೊಂದಾಣಿಕೆ ಮಾಡಿಕೊಂಡು, ಸಾವಿರ ರೂಪಾಯಿ ಕಮಿಷನ್ ಆಸೆಗೆ ಬಿದ್ದು ಹೊರ ರಾಜ್ಯದ ಟ್ಯಾಂಕರ್‌ಗಳಿಗೆ ಲೋಡ್ ಮಾಡಿಕೊಡುತ್ತಿದ್ದಾರೆ. ಇದು ನಿಲ್ಲಬೇಕು, ಸ್ಥಳೀಯರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದರು.

ಟ್ಯಾಂಕರ್ ಮಾಲೀಕರ ಸಂಘದ ನಾಗರಾಜ ನಾಯ್ಕ, ಗೋಪಾಲ ನಾಯ್ಕ, ಪ್ರಶಾಂತ ನಾಯ್ಕ, ನಾಗೇಂದ್ರ ತಳೆಕರ, ಸೂರಜ ಖಾರ್ವಿ, ರಾಜೇಶ ಗಾಂವ್ಕರ ಇದ್ದರು.

Share This
300x250 AD
300x250 AD
300x250 AD
Back to top