Slide
Slide
Slide
previous arrow
next arrow

2040ರ ವೇಳೆಗೆ ಚಂದ್ರನತ್ತ ಗಗನಯಾತ್ರಿಗಳು, 2035ರ ವೇಳೆಗೆ ಬಾಹ್ಯಾಕಾಶ ನಿಲ್ದಾಣ: ಭಾರತದ ಗುರಿ

300x250 AD

ನವದೆಹಲಿ: ಭಾರತವು 2040 ರ ವೇಳೆಗೆ ಚಂದ್ರನ ಬಳಿಗೆ ಗಗನಯಾತ್ರಿಗಳನ್ನು ಕಳುಹಿಸುವ ಗುರಿ ಹೊಂದಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ, ಪ್ರಧಾನಿ ನರೇಂದ್ರ ಮೋದಿ ಅವರು 2035 ರ ವೇಳೆಗೆ ಬಾಹ್ಯಾಕಾಶ ನಿಲ್ದಾಣದ ಯೋಜನೆಗಳನ್ನು ಒಳಗೊಂಡಂತೆ ಬಾಹ್ಯಾಕಾಶ ಇಲಾಖೆಗೆ  ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಆಗಸ್ಟ್‌ನಲ್ಲಿ ಚಂದ್ರನ ಅನ್ವೇಷಿಸದ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶವಾದಾಗ ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳು ಗರಿಗೆದರಿವೆ. ರಷ್ಯಾದ ಮಿಷನ್ ವಿಫಲವಾದ ಕೆಲವೇ ದಿನಗಳಲ್ಲಿ ಭಾರತ ಈ ಸಾಧನೆ ಮಾಡಿದ್ದು ಮಹತ್ವಪಡೆದುಕೊಂಡಿತ್ತು. ಅಲ್ಲದೇ ಭಾರತ ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದ  ನಾಲ್ಕನೇ ದೇಶವಾಗಿ ಹೊರಹೊಮ್ಮಿದೆ.

 ಆ ಯಶಸ್ಸಿನ ನಂತರ, ಭಾರತವು ಸೂರ್ಯನನ್ನು ಅಧ್ಯಯನ ಮಾಡಲು ರಾಕೆಟ್ ಅನ್ನು ಉಡಾಯಿಸಿ ಯಶಸ್ವಿಯಾಯಿತು. ಇಸ್ರೋ ತನ್ನ ಮಾನವ ಸಹಿತ ಬಾಹ್ಯಾಕಾಶ ಕಾರ್ಯಾಚರಣೆಯ ಭಾಗವಾಗಿ ಈ ವಾರದ ಬಳಿಕ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ.

300x250 AD

“2035 ರ ವೇಳೆಗೆ ‘ಭಾರತೀಯ ಅಂತರಿಕ್ಷಾ ನಿಲ್ದಾಣ’ ಸ್ಥಾಪನೆ ಮತ್ತು 2040 ರ ವೇಳೆಗೆ ಮೊದಲ ಭಾರತೀಯನನ್ನು ಚಂದ್ರನತ್ತ ಕಳುಹಿಸುವುದು ಸೇರಿದಂತೆ ಹೊಸ ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನು ಭಾರತವು ಈಗ ಗುರಿಯಾಗಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ನಿರ್ದೇಶಿಸಿದ್ದಾರೆ” ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

Share This
300x250 AD
300x250 AD
300x250 AD
Back to top