Slide
Slide
Slide
previous arrow
next arrow

ಪ್ರಕೃತಿ ಉಪಾಸನೆಯೇ ರಾಜರಾಜೇಶ್ವರಿಯ ಆರಾಧನೆ: ರಾಘವೇಶ್ವರ ಶ್ರೀ

300x250 AD

ಮಂಗಳೂರು: ಇಡೀ ನಮ್ಮ ಬದುಕು ಪ್ರಕೃತಿಯ ದಯೆ. ಪಂಚಭೂತಗಳೆಲ್ಲವೂ ಪ್ರಕೃತಿ. ನಿಂತ ನೆಲ, ಕುಡಿಯುವ ಜಲ, ಅಗ್ನಿ, ವಾಯು, ಆಕಾಶ ಎಲ್ಲವೂ ಆಕೆಯ ಕರುಣೆ. ಈ ಪ್ರಕೃತಿಯನ್ನು ಆರಾಧಿಸುವುದೇ ನವರಾತ್ರಿ ಉಪಾಸನೆಯ ವಿಶೇಷ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

ಮಾಣಿ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನವರಾತ್ರ ನಮಸ್ಯಾ ಅಂಗವಾಗಿ ‘ಶ್ರೀ ಲಲಿತೋಪಾಖ್ಯಾನ’ ಪ್ರವಚನ ಮಾಲಿಕೆಯ ಎರಡನೇ ದಿನದ ಪ್ರವಚನವನ್ನು ಶ್ರೀಗಳು ಅನುಗ್ರಹಿಸಿದರು. ರಾಜರಾಜೇಶ್ವರಿ ತ್ರಿಪುರಸುಂದರಿಯ ಮೊದಲ ರೂಪ ಪ್ರಕೃತಿ. ಬ್ರಹ್ಮ ಧ್ಯಾನ ಮಾಡಿದಾಗ ಪರಾಶಕ್ತಿ ಬೆಟ್ಟವಾಗಿ ಬ್ರಹ್ಮನಿಂದ ಒಡಮೂಡಿತು. ಸಕಲ ಜೀವರಾಶಿಗಳ ಮಾತೆಯಾದ ಶಕ್ತಿಸ್ವರೂಪಿಣಿ ವಿಶ್ವದ ಸೃಷ್ಟಿಕರ್ತೆಯಾಗಿ, ಪ್ರಕೃತಿಯಾಗಿ ಆವೀರ್ಭವಿಸಿದಳು. ಪಂಚೇಂದ್ರಿಯಗಳು ಕೂಡಾ ಪ್ರಕೃತಿಯೇ. ನಮ್ಮ ಅನುಭವಕ್ಕೆ ಬರುವುದೆಲ್ಲವೂ ಪ್ರಕೃತಿ. ದೇವಿಯ ಮಡಿಲಲ್ಲೇ ನಾವೆಲ್ಲ ಇದ್ದೇವೆ ಎಂದು ವಿಶ್ಲೇಷಿಸಿದರು.

ಸರಿಯಾಗಿ ಆಕೆಯ ಆರಾಧನೆ ನಡೆದರೆ, ಆಕೆಯ ಕರುಣೆ ಮಳೆಯಾಗಿ ಭಕ್ತರತ್ತ ಹರಿಯುತ್ತದೆ. ದೇವಿಯ ಉಪಾಸನೆಯಲ್ಲಿ ಶ್ರದ್ಧೆ- ಭಕ್ತಿ ಮುಖ್ಯ. ಅವುಗಳಿದ್ದರೆ, ವಿಧಿಯುಕ್ತವಾಗಿ ಮಾಡಲು ಸಾಧ್ಯವಾಗದೇ ವಿಧಿಹೀನವಾಗಿ ಮಾಡಿದರೂ ಆಕೆಗೆ ಸಲ್ಲುತ್ತದೆ. ಇಹ- ಪರದ ಸುಖವನ್ನು ಆಕೆ ಅನುಗ್ರಹಿಸುತ್ತಾಳೆ. ಪುಣ್ಯ ಸಂಪಾದನೆ ಮಾಡಿಕೊಳ್ಳುವ ಸುಲಭ ಮಾರ್ಗ ತ್ರಿಪುರಸುಂದರಿಯ ಆರಾಧನೆ ಎಂದರು. ಒಳ್ಳೆಯ ವಿಷಯಗಳ ಮೇಲೆ ಜಿಜ್ಞಾಸೆ ಅಗತ್ಯ. ಭಗವಂತ ಮುನಿಗಳ ಜತೆ ಮುನಿಯಾಗಿ, ಒಳ್ಳೆಯವರ ಜತೆ ಒಳ್ಳೆಯವರಾಗಿ ಹೇಗೆ ಅನುಗ್ರಹಿಸುತ್ತಾನೆ ಎನ್ನುವುದಕ್ಕೆ ಲಲಿತೋಪಾಖ್ಯಾನವನ್ನು ಹಯಗ್ರೀವ ಮುನಿಯ ರೂಪ ಪಡೆದು ಅಗಸ್ತ್ಯರಿಗೆ ಅನುಗ್ರಹಿಸುತ್ತಾರೆ. ಬಗೆಬಗೆಯಲ್ಲಿ ಜೀವರಾಶಿಗಳ ಮೇಲೆ ಕರುಣೆ ತೋರುವ ಪರಿಯನ್ನು ಬಣ್ಣಿಸಿದ್ದಾಗಿ ವಿವರಿಸಿದರು.

300x250 AD

ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಮಾಣಿಮಠ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್, ಪುತ್ತೂರಿನ ಸ್ವರ್ಣೋದ್ಯಮಿ ಬಲರಾಂ ಆಚಾರ್ಯ ದಂಪತಿ, ಹವ್ಯಕ ಮಹಾಮಂಡಲ ಗೌರವ ಕಾರ್ಯದರ್ಶಿ ಪೆದಮಲೆ ನಾಗರಾಜ ಭಟ್, ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ಯುವ ಪ್ರಧಾನ ಕೇಶವ ಪ್ರಕಾಶ್ ಮುಣ್ಚಿಕಾನ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ್ ಕುದುಪುಲ, ಮುಳ್ಳೇರಿಯಾ ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಮಂಗಳೂರು ಮಂಡಲ ಉಪಾಧ್ಯಕ್ಷ ರಾಜಶೇಖರ ಕಾಕುಂಜೆ, ಉಂಡೆಮನೆ ವಿಶ್ವೇಶ್ವರ ಭಟ್, ಶ್ರೀಶಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top