Slide
Slide
Slide
previous arrow
next arrow

ಕಾರು-ಲಾರಿ ನಡುವೆ ಅಪಘಾತ: ಓರ್ವ ಮಹಿಳೆ‌ ಸಾವು

300x250 AD

ಭಟ್ಕಳ: ನಗರದ ಬೈಪಾಸ್ ಬ್ರಿಡ್ಜ್ ಸಮೀಪ ಕಾರು ಹಾಗೂ ಲಾರಿಯ ನಡುವೆ ಅಪಘಾತ ಸಂಭವಿಸಿದ್ದು, ಪರಿಣಾಮ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.

ರೀಟಾ ಡಿಸೋಜಾ (38) ಮೃತ ಮಹಿಳೆಯಾಗಿದ್ದು, ಜೇವಿಯರ್ ರಾಜ್ ಡಿಸೋಜಾ ಮತ್ತು ಪುತ್ರಿ ಇನ್ರಿಕಾ ಎಂಬುವವರು ಗಾಯಗೊಂಡಿದ್ದಾರೆ. ಉಡುಪಿಯಿಂದ ಗೋವಾ ಕಡೆಗೆ ಹೋಗುವ ವೇಳೆ ಅಪಘಾತ ಸಂಭವಿಸಿದೆ.

ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದು, ಮೃತ ಮಹಿಳೆಯ ಪತಿ ಹಾಗೂ ಪುತ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

300x250 AD

ಅಪಘಾತ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This
300x250 AD
300x250 AD
300x250 AD
Back to top