Slide
Slide
Slide
previous arrow
next arrow

ಅ.19ಕ್ಕೆ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆ

300x250 AD

ಶಿರಸಿ: ಶಿರಸಿಯ ಭಾರತ ಸೇವಾದಳ ಭವನದಲ್ಲಿ ಅ.15, ರವಿವಾರದಂದು ನಡೆದ ಚಿತ್ರಕ್ಕೆ ಬಣ್ಣ ಹಚ್ಚುವ ಚಿತ್ರಕಲಾ ಸ್ಫರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಅ.19, ಗುರುವಾರ ಮಧ್ಯಾಹ್ನ 4.00 ಗಂಟೆಗೆ ಶಿರಸಿಯ ಹೊಸಪೇಟೆ ರಸ್ತೆಯಲ್ಲಿರುವ ಎಸ್.ಬಿ.ಐ. ಲೈಪ್ ಇನ್ಸೂರೆನ್ಸ ಕಛೇರಿಯಲ್ಲಿ (ಟ್ರೇಂಡ್ಸ್ ಬಟ್ಟೆ ಅಂಗಡಿ ಎದುರು) ಆಯೋಜಿಸಲಾಗಿದೆ.

ಕಾರ್ಯಕ್ರಮವ ಭಾಗವಹಿಸಿದ ಎಲ್ಲಾ ಮಕ್ಕಳು / ಪಾಲಕರು ಬರಬೇಕು. ಪ್ರತಿ ವಿಭಾಗಕ್ಕೂ ಪ್ರಥಮ, ದ್ವೀತಿಯ, ತೃತೀಯ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ / ಕಿಟ್ ನೀಡಲಾಗುವುದು. ಬಹುಮಾನ ಪಡೆದವರ ಹೆಸರನ್ನು ಆ ದಿನ ತಿಳಿಸಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ –Tel:+919343563204 / Tel:+917892721160 ಸಂಪರ್ಕಿಸಲು ಕೋರಿದೆ.

300x250 AD
Share This
300x250 AD
300x250 AD
300x250 AD
Back to top