Slide
Slide
Slide
previous arrow
next arrow

ಶ್ರೀಕಾಂತ ಕೆರಿಯಪ್ಪ ಮಡಿವಾಳಗೆ ‘ಅತ್ಯುತ್ತಮ ಹೈನುಗಾರ’ ಪ್ರಶಸ್ತಿ ಪ್ರದಾನ

300x250 AD

ಶಿರಸಿ: ಇಂದು ಹೈನುಗಾರಿಕೆ ರೈತನ ಬದುಕಿಗೆ ಬೆನ್ನೆಲುಬಾಗಿ ನಿಂತಿದೆ. ಒಂದು ದೊಡ್ಡ ಉದ್ಯಮವಾಗಿ ಬೆಳೆದಿರುವ ಹೈನುಗಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾದರಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹಾಗೂ ಹಾಲು ಉತ್ಪಾದಕರನ್ನು ಗುರುತಿಸಿ ಪುರಸ್ಕರಿಸಲು ವಿಜಯ ಕರ್ನಾಟಕ ದಿನಪತ್ರಿಕೆ “ಹೈನು-ಹೊನ್ನು ಕ್ಷೀರ ಪಥ ಜೀವನ ರಥ” ಶೀರ್ಷಿಕೆಯಡಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಅಂತೆಯೇ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಸಹಯೋಗದೊಂದಿಗೆ ಧಾರವಾಡ ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಯ ಜಿಲ್ಲಾ ಹೈನುಗಾರರ ಸಮ್ಮೇಳನವು ಅ.15 ಭಾನುವಾರದಂದು ಧಾರವಾಡ ಸಹಕಾರ ಹಾಲು ಒಕ್ಕೂಟದ ಲಕ್ಕಮನಹಳ್ಳಿಯಲ್ಲಿರುವ ನಂದಿನಿ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು.

ಧಾರವಾಡ ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಯ ಶಿರಸಿ ತಾಲೂಕಿನ ಗುಡ್ನಾಪುರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಪೂರೈಸುತ್ತಿರುವ ಶ್ರೀಕಾಂತ ಕೆರಿಯಪ್ಪ ಮಡಿವಾಳ ಇವರಿಗೆ ‘ಅತ್ಯುತ್ತಮ ಹೈನುಗಾರ’ ಪ್ರಶಸ್ತಿಯನ್ನು ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹಾಗೂ ಧಾರವಾಡ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷರಾದ ಶಂಕರ ವೀರಪ್ಪ ಮುಗದ ವಿತರಿಸಿದರು. ಕಾರ್ಯಕ್ರಮದಲ್ಲಿ ಧಾರವಾಡ ಸಹಕಾರ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಹರ್ಷ ವ್ಯಕ್ತ ಪಡಿಸಿ, ಶ್ರೀಕಾಂತ ಕೆರಿಯಪ್ಪ ಮಡಿವಾಳ ಹೈನುಗಾರಿಕೆಯಲ್ಲಿ ಮಾಡಿದ ಸಾಧನೆ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಧಾರವಾಡ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದಂತಹ ಶಂಕರ ಪರಮೇಶ್ವರ ಹೆಗಡೆ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top