Slide
Slide
Slide
previous arrow
next arrow

ನಿಖಿಲ್ ಕ್ಷೇತ್ರಪಾಲ, ವಿನಯ್ ನಾಯಕಗೆ ರೋಟರಿ ಗೌರವ ಪ್ರಶಸ್ತಿ

300x250 AD

ಕುಮಟಾ: ಇಲ್ಲಿಯ ರೋಟರಿ ಸಂಸ್ಥೆಯು ತನ್ನ ಸ್ನೇಹ ಮತ್ತು ಸೌಹಾರ್ದತೆಯ ದ್ಯೋತಕವಾಗಿ ಕೊಡಮಾಡುವ ವಿಶೇಷ ಮಾಸಿಕ ಗೌರವ ಪ್ರಶಸ್ತಿ- ಸ್ಮರಣಿಕೆ ಹಾಗೂ ಪ್ರಮಾಣ ಪತ್ರವನ್ನು ಕಿರಿಯ ಕ್ರಿಯಾಶೀಲ ಸದಸ್ಯ ನಿಖಿಲ್ ಕ್ಷೇತ್ರಪಾಲ ಹಾಗೂ ವಿನಯ್ ನಾಯಕಗೆ ನೀಡಿದೆ.

ಕ್ಲಬ್ ಚಟುವಟಿಕೆಗಳಿಗೆ ಸಂಬ0ಧಿಸಿದ0ತೆ ಉತ್ತಮವಾಗಿ ಕಾರ್ಯನಿರ್ವಹಿಸಿದ ಇಬ್ಬರನ್ನೂ ಪರಿಗಣಿಸಿದ ಸಂಸ್ಥೆಯು ಸೆವೆಂಥ್ ಹೆವನ್ ರೆಸಾರ್ಟ್ನಲ್ಲಿ ಹಮ್ಮಿಕೊಂಡಿದ್ದ ಸತ್ಕಾರಕೂಟದಲ್ಲಿ ಹಿರಿಯ ರೋಟರಿಯ ಸದಸ್ಯರಾದ ಅರುಣ ಉಭಯಕರ, ಡಾ.ದೀಪಕ ಡಿ.ನಾಯಕ, ಎಸ್.ಎಸ್.ಭಟ್ ಲೋಕೇಶ್ವರ ಅವರ ಸಮ್ಮುಖದಲ್ಲಿ ರೋಟರಿಯ ಅಸಿಸ್ಟಂಟ್ ಗವರ್ನರ್ ವಸಂತರಾವ್, ಅಧ್ಯಕ್ಷ ಎನ್.ಆರ್.ಗಜು, ಕಾರ್ಯದರ್ಶಿ ರಾಮದಾಸ ಗುನಗಿ ಕೋಶಾಧ್ಯಕ್ಷ ಸಂದೀಪ ನಾಯಕ, ಕಾರ್ಯಕ್ರಮ ಸಂಯೋಜಕ ಜಯವಿಠ್ಠಲ ಕುಬಾಲ ಸೇರಿ ಪ್ರದಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಧಿಕ ಸಂಖ್ಯೆಯಲ್ಲಿ ರೋಟರಿ ಪರಿವಾರದ ಸದಸ್ಯರು ಉಪಸ್ಥಿತರಿದ್ದು ಶುಭಹಾರೈಸಿದರು. ಸೆವೆಂಥ್ ಹೆವೆನ್ ಪಾಲುದಾರರು ಹಾಗೂ ಸಿಬ್ಬಂದಿಗಳು ಸಹಕರಿಸಿದರು.

300x250 AD
Share This
300x250 AD
300x250 AD
300x250 AD
Back to top