ಅಂಕೋಲಾ: ಅ.14ರಂದು ಬೆಳಿಗ್ಗೆ 10 ಗಂಟೆಗೆ ಕುಮಟಾ ಚಿತ್ತರಂಜನ್ ಟಾಕೀಜ್ ಪಕ್ಕದ ಕುಮಟಾ ಮೀನುಗಾರರ ಸಹಕಾರಿ ಸಂಘದ ಸಭಾಭವನದಲ್ಲಿ ಉತ್ತರಕನ್ನಡ ಜಿಲ್ಲಾ ಮೀನುಗಾರರ ಸಹಕಾರಿ ಸಂಘಗಳ ಒಕ್ಕೂಟ ಅಂಕೋಲಾ ಸಭೆ ಕರೆಯಲಾಗಿದೆ.
ಸಭೆಯಲ್ಲಿ ಮುಖ್ಯವಾಗಿ ಕೇಂದ್ರ ಪುರಸ್ಕೃತ ಉಳಿತಾಯ ಮತ್ತು ಪರಿಹಾರ ಯೋಜನೆಯ ವಂತಿಕೆ ಮತ್ತು ಪೂರ್ಣ ಪ್ರಮಾಣದ ಅನುದಾನ ಇದುವರೆಗೂ ಫಲಾನುಭವಿಗಳ ಖಾತೆಗೆ ಜಮಾ ಆಗದೇ ಇರುವ, ಮೀನುಗಾರಿಕೆ ಇಲಾಖೆ ಮೀನುಗಾರರ ಆಶೋತ್ತರಗಳಿಗೆ ಕೆಲವು ಅಧಿಕಾರಿಗಳು ಸ್ಪಂದಿಸದೇ, ಮಾಹಿತಿ ನೀಡದೇ, ಯಾವುದೇ ಯೋಜನೆ ಕುರಿತು ಸ್ಪಷ್ಟ ನಿಲುವು ತೋರದೇ ತಾರತಮ್ಯ, ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಕುರಿತು ಚರ್ಚಿಸಿ ಮುಂದಿನ ಕ್ರಮ ವಹಿಸಲು ನಿರ್ಧರಿಸುವುದು.
ಮತ್ಸ್ಯಾಶ್ರಯ ಯೋಜನೆ, ಬಡ್ಡಿ ರಹಿತ ಸಾಲ ಯೋಜನೆ ಅನುಷ್ಠಾನ ಆಗದೇ ಇರುವ ಕುರಿತು ಚರ್ಚಿಸಿ ಮುಂದಿನ ಕ್ರಮ ವಹಿಸಲು ನಿರ್ಧರಿಸುವುದು ಹಾಗೂ ಇನ್ನಿತರ ಮೀನುಗಾರರ ಸಮಸ್ಯೆಗಳನ್ನು ಚರ್ಚಿಸಿ, ನಿರ್ಣಯಿಸಿ ಸಚಿವರ ಗಮನಕ್ಕೆ ತರುವುದು. ಕಾರಣ ಜಿಲ್ಲೆಯ ಎಲ್ಲಾ ಮೀನುಗಾರರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಉಪಾಧ್ಯಕ್ಷರು, ನಿರ್ದೇಶಕರುಗಳು, ಬೆಂಬಲಿಗರು, ಹಿತೈಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಘದ ಜಿಲ್ಲಾಧ್ಯಕ್ಷ ಹರಿಹರ ವಿ.ಹರಿಕಾಂತ ಹಿಲ್ಲೂರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.