ಶಿರಸಿಯ ಅರಣ್ಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ 14 ವರ್ಷ ವಯೋಮಿತಿಯ ಬಾಲಕ- ಬಾಲಕಿಯರ ಬೆಳಗಾವಿ ವಿಭಾಗ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಬ್ಯಾಡ್ಮಿಂಟನ್ ಆಡುವ ಮೂಲಕ ಶಾಸಕ ಭೀಮಣ್ಣ ಟಿ.ನಾಯ್ಕ ಉದ್ಘಾಟಿಸಿ ಶುಭ ಕೋರಿದರು. ಡಿಡಿಪಿಐ ಬಸವರಾಜ್ ಪಿ., ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಪ್ರಕಾಶ್ ತಾರಿಕೊಪ್ಪ ಉಪಸ್ಥಿತರಿದ್ದರು.