ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಗುರುವಾರ ಶಾಸಕ ಸತೀಶ್ ಸೈಲ್ ಭೇಟಿ ಮಾಡಿ ಕ್ಷೇತ್ರದ ಕುರಿತು ಹಲವು ಸಮಯ ಚರ್ಚೆ ನಡೆಸಿ, ಮನವಿಯನ್ನು ಸಲ್ಲಿಸಿದ್ದಾರೆ.
ವಿಧಾನಸೌದದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನ ಭೇಟಿ ಮಾಡಿದ ಸತೀಶ್ ಸೈಲ್ ಕ್ಷೇತ್ರದ ಕುರಿತು ಹಲವು ವಿಚಾರಗಳನ್ನ ಚರ್ಚಿಸುವ ಜೊತೆ ಮನವಿಯನ್ನ ಸಲ್ಲಿಸಿದ್ದಾರೆ. ಕಾರವಾರ ಜಿಲ್ಲಾ ಆಸ್ಪತ್ರೆಯನ್ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಪರಿವರ್ತಿಸುವ, ಹಾಗೂ ಜನರ ಚಿಕಿತ್ಸೆಗೆ ಅಗತ್ಯವಿರುವ ನ್ಯೂರಾಲಾಜಿಸ್ಟ್, ನ್ಯೂರೋ ಸರ್ಜನ್, ಕಾರ್ಡಿಯಾಲಿಜಿಸ್ಟ್, ನೆಫ್ರಾಲಾಜಿಸ್ಟ್, ವೈದ್ಯರ ನೇಮಕ ಕುರಿತು ಮನವಿ ಸಲ್ಲಿಸುವುದರ ಜೊತೆಗೆ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆಗೆ ಸಹಕಾಯವಾಗುವ ಕ್ಯಾಥ್ ಲ್ಯಾಬ್ ಸ್ಥಾಪನೆ ಮಾಡುವ ಕುರಿತು ಮನವಿಯನ್ನ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಇನ್ನು ಮುಡಗೇರಿಯಲ್ಲಿ ಈಗಾಗಲೇ ಕೈಗಾರಿಕೆಗಳಿಗೆ ವಶಪಡಿಸಿಕೊಂಡಿರುವ ಭೂಮಿಗಳಿಗೆ ಪರಿಹಾರ ಕೊಡುವ ಕಾರ್ಯ ನಡೆದಿದ್ದು ಕಾರವಾರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆಯನ್ನ ನಿವಾರಣೆ ಮಾಡುವಂತೆ ಮನವಿ ನೀಡಿದ್ದಾರೆ. ಕಾರವಾರ ಗಡಿ ಭಾಗವಾಗಿದ್ದು ಪ್ರತಿನಿತ್ಯ ಉದ್ಯೋಗಕ್ಕಾಗಿ ಗೋವಾಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ನಿಟ್ಟಿನಲ್ಲಿ ಕೈಗಾರಿಕೆಗಳ ಸ್ಥಾಪನೆ ಶೀಘ್ರದಲ್ಲಿ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ಇನ್ನು ಕ್ಷೇತ್ರದಲ್ಲಿ ಹಲವು ಕಡೆ ಸೇತುವೆ ನಿರ್ಮಾಣ ಕಾರ್ಯ ಅರ್ಧದಲ್ಲೇ ನಿಂತಿದ್ದು ಇನ್ನು ಕೆಲ ಕಡೆ ಹೊಸದಾಗಿ ಸೇತುವೆಗಳನ್ನ ಮಾಡುವ ಅಗತ್ಯವಿದ್ದು ಅನುದಾನ ಬಿಡುಗಡೆ ಮಾಡುವ, ಅಲ್ಲದೇ ಮುಖ್ಯಮಂತ್ರಿ ಪರಿಹಾರ ನಿಧಿಯ ಬಿಡುಗಡೆ ಕುರಿತು ಚರ್ಚೆ ನಡೆಸಿ ಮನವಿಯನ್ನ ಸಲ್ಲಿಸಿದ್ದಾರೆ ಎನ್ನಲಾಗಿದೆ.