Slide
Slide
Slide
previous arrow
next arrow

ಅ.13ಕ್ಕೆ ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣ ಔಷಧಿ ವಿತರಣೆ ಹಾಗೂ ಜಾಗೃತಿ ಸಪ್ತಾಹ ಕಾರ್ಯಕ್ರಮ

300x250 AD

ಶಿರಸಿ: ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣ ಔಷಧಿ ವಿತರಣೆ ಹಾಗೂ ಜಾಗೃತಿ ಸಪ್ತಾಹದ ಉದ್ಘಾಟನೆ ಮತ್ತು ರೈತರಿಗೆ ವಿವಿಧ ಯೋಜನೆಗಳ ಕಾರ್ಯಾದೇಶದ ವಿತರಣೆ ಕಾರ್ಯಕ್ರಮವನ್ನು ಅ.13 ರಂದು ಬೆಳಿಗ್ಗೆ 9-30ಕ್ಕೆ ತೋಟಗಾರಿಕಾ ಇಲಾಖೆಯ ಡಾ.ಎಂ.ಎಚ್.ಮರಿಗೌಡ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಲಿದ್ದು, ತೋಟಗಾರಿಕಾ ಉಪನಿರ್ದೇಶಕ ಡಾ.ಬಿ.ಪಿ.ಸತೀಶ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿರಸಿ ತಾಲೂಕಾ ಆತ್ಮ ಸಮಿತಿಯ ಅಧ್ಯಕ್ಷ ಜಿ.ಆರ್.ಹೆಗಡೆ ಹಾಗೂ ಕೃಷಿ ಉಪನಿರ್ದೇಶಕ ನಟರಾಜ ಟಿ. ಉಪಸ್ಥಿತರಿರಲಿದ್ದಾರೆ.

300x250 AD

ಸಂಪನ್ಮೂಲ ವ್ಯಕ್ತಿಗಳಾಗಿ ಅಗ್ರಿಕಲ್ಚರ್ ಡೆವಲಪ್ಮೆಂಟ್ ಸೊಸೈಟಿಯ ವಿಷಯ ತಜ್ಞ ವಿ.ಎಂ.ಹೆಗಡೆ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ತಾಲೂಕಿನ ಎಲ್ಲ ಗ್ರಾ.ಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು ಆಹ್ವಾನಿಸಲಾಗಿದೆ ಎಂದು ಹಿರಿಯ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top