Slide
Slide
Slide
previous arrow
next arrow

ಇಸ್ರೇಲ್‌ನಲ್ಲಿದ್ದಾರೆ ಹೊನ್ನಾವರ ಮೂಲದ 75 ಕ್ಕೂ ಹೆಚ್ಚಿನ ಮಂದಿ!

300x250 AD

ಹೊನ್ನಾವರ: ಇಸ್ರೇಲ್‌ನಲ್ಲಿ ಹಮಾಸ್ ಬಂಡುಕೋರರ ನಡುವೆ ನಡೆಯುತ್ತಿರುವ ಯುದ್ಧ ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದ್ದು, ಜಿಲ್ಲೆಯ ಹೊನ್ನಾವರ ತಾಲೂಕಿನಿಂದ ವ್ಯಾಪಾರ, ಉದ್ಯೋಗಕ್ಕಾಗಿ ತೆರಳಿದವರು ಸುಮಾರು 75ಕ್ಕೂ ಹೆಚ್ಚು ಜನರು ಸದ್ಯ ಸುರಕ್ಷೀತವಾಗಿದ್ದಾರೆ. ಆದರೆ ಕುಟುಂಬದವರಿಗೆ ಮುಂದೆ ಏನಾಗಲಿದೆ ಎನ್ನುವ ಆತಂಕದ ನಡುವೆ ದಿನ ಕಳೆಯುತ್ತಿದ್ದಾರೆ.

ತಾಲೂಕಿನ 75ಕ್ಕೂ ಅಧಿಕ ನಿವಾಸಿಗಳು ಇಸ್ರೇನಲ್ಲಿ ಇರುವ ಮಾಹಿತಿ ಇದೆ. ಅದರಲ್ಲೂ ಮುಗ್ವಾ, ಹಡಿನಬಾಳ, ಕಾಸರಕೋಡ, ಗ್ರಾ.ಪಂ. ವ್ಯಾಪ್ತಿಯವರು ಅಧಿಕವಿದ್ದು, ಹೊಸಾಕುಳಿ, ಇಡಗುಂಜಿ, ಹೊನ್ನಾವರ ಪಟ್ಟಣ ವ್ಯಾಪ್ತಿಯವರು ಕೆಲ ಯುವಕ ಯುವತಿಯರು ಇದ್ದಾರೆ. ಸದ್ಯ ಎಲ್ಲರೂ ಯುದ್ದ ನಡೆಯುವ ಪ್ರದೇಶಗಿಂತ ದೂರದಲ್ಲಿದ್ದು, ರಾಯಭಾರ ಕಛೇರಿಯವರು ಸಂಪರ್ಕದಲ್ಲಿದ್ದಾರೆ. ಸದ್ಯ ನಾವು ಸುರಕ್ಷೀತವಾಗಿದ್ದೇವೆ ಎಂದು ಮನೆಯವರಿಗೆ ವಾಟ್ಸಪ್ ಕರೆಯ ಮೂಲಕ  ಅಲ್ಲಿಂದಲೇ ಭರವಸೆ ನೀಡುತ್ತಿದ್ದಾರೆ.

ಆದರೆ ಕೆಲವರು ಮನೆ ಕೆಲಸ ಹಾಗೂ ಇತರೆ ದೈನಂದಿನ ಕಾರ್ಯಕ್ಕಾಗಿ ಮನೆಯಿಂದ ಹೊರ ಹೊಗುದರಿಂದ ಆ ಕುಟುಂಬದವರಲ್ಲಿ ಆತಂಕದಲ್ಲಿದ್ದಾರೆ. ಅಪಾಯದ ಮುನ್ಸೂಚನೆ ಬಂದಾಗ ಸೈರನ್ ಆಗಲಿದೆ. ನಂತರ ಮನೆಯೊಳಗಡೆ ಹೋಗಿ ಸುರಕ್ಷೀತ ಸ್ಥಳದಲ್ಲಿ ಇರಬೇಕು. ರಸ್ತೆ ಮಧ್ಯೆ ಹೋಗುವಾಗ ಒಂದೊಮ್ಮೆ ಆದರೆ ರಸ್ತೆ ಮೇಲೆ ಮಲಗುದು ಅಥವಾ ಸುತ್ತಮುತ್ತಲಿರುವ ಸುರಕ್ಷಿತ ತಾಣದಲ್ಲಿ ಆಶ್ರಯ ಪಡೆಯಲು ಸೂಚನೆ ನೀಡಿದ್ದಾರೆ ಎಂದು ತಾಲೂಕಿನ ಮೂಲದವರಾದ ಸಾಂತ ಡಿಸೋಜಾ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಭಾರತೀಯ ಮೂಲದವರು ಹೆಚ್ಚಿನವರು ವಾಸವಿರುವ ಸ್ಥಳ ಸದ್ಯ ಸುರಕ್ಷೀತವಾಗಿದ್ದು ಇಲ್ಲಿಯ ಅಧಿಕಾರಿಗಳು ನಮ್ಮ ದೇಶದಿಂದ ಆಗಮಿಸದವರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.

300x250 AD

ಸದ್ಯ ನಮ್ಮ ಕುಟುಂಬದವರು ಅಲ್ಲಿ ಸುರಕ್ಷೀತವಾಗಿದ್ದಾರೆ. ಆದರೆ ಆತಂಕ ಇದೆ. ಸಾಧ್ಯವಾದರೆ ವಾಪಸ್ಸು ಬರವಂತೆ ಕುಟುಂಬದವರೆಲ್ಲರು ಒತ್ತಾಯಿಸುತ್ತಿದ್ದೇವೆ, ನಮ್ಮ ಪ್ರದೇಶ ಸುರಕ್ಷಿತವಾಗಿದ್ದು, ಅಂತಹ ಸನ್ನಿವೇಶ ಎದುರಾದಲ್ಲಿ ಬರುತ್ತೇವೆ ಎಂದಿದ್ದಾರೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಇಸ್ರೇಲ್‌ನಲ್ಲಿ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರ ಉದ್ದೇಶಗಳಿಗೆ ಹೋಗಿರುವ ಮತ್ತು ವಾಸವಿರುವ ಜಿಲ್ಲೆಯ ನಾಗರಿಕರ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿದೆ.

Share This
300x250 AD
300x250 AD
300x250 AD
Back to top