Slide
Slide
Slide
previous arrow
next arrow

ವಿ.ಡಿ.ಹೆಗಡೆ ಕಾಲೇಜು ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ

300x250 AD

ಹಳಿಯಾಳ: 2023- 24ನೇ ಸಾಲಿನ ಜಿಲ್ಲಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಫುಟ್ಬಾಲ್ ಮತ್ತು ಕಬಡ್ಡಿ ಕ್ರೀಡಾಕೂಟದಲ್ಲಿ ವ್ಹಿ.ಡಿ.ಹೆಗಡೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ತೋರಿದ್ದಾರೆ.

ಕ್ರೀಡಾಕೂಟದಲ್ಲಿ ವ್ಹಿ.ಡಿ.ಹೆಗಡೆ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಸುವರ್ಣ ಮಗರ್, ರೂಪಾ ಗೌಡಾ, ಸ್ವಾತಿ ಉಪ್ಪಾರ, ದೇವಕ್ಕ ಹುಂದ್ರಿ ಫುಟ್ಬಾಲ್‌ನಲ್ಲಿ, ಕಬಡ್ಡಿಯಲ್ಲಿ ಪ್ರತಿಕಾ ದೇಸುರಕರ, ಸಾನಿಯಾ ಗೌಡಾ, ಸ್ನೇಹಾ ಕಲಾಲ, ಇವರು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

300x250 AD

ಈ ವಿದ್ಯಾರ್ಥಿಗಳ ಸಾಧನೆಗಾಗಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ವ್ಹಿ.ಡಿ.ಹೆಗಡೆ, ಕಾರ್ಯಾಧ್ಯಕ್ಷ ಸುನಿಲ ಹೆಗಡೆ, ಶ್ರೀಪತಿ ಭಟ್ಟ, ನಿತಿನ್ ದೇಶಪಾಂಡೆ, ಉದಯ ಹೂಲಿ ಹಾಗೂ ಸದಸ್ಯ ವರ್ಗ, ಪ್ರಾಚಾರ್ಯರು ಮತ್ತು ಉಪನ್ಯಾಸಕರ ವರ್ಗ ತುಂಬು ಹೃದಯದ ಅಭಿನಂದನೆಗಳನ್ನು ಕೋರಿದ್ದಾರೆ.

Share This
300x250 AD
300x250 AD
300x250 AD
Back to top